ಮಂಡ್ಯ : ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಮಂಡ್ಯ ಜಿಲ್ಲೆಯಲ್ಲಿ ಸಂಚರಿಸಿತು. ಮೈಸೂರಿನಿಂದ ಮಂಡ್ಯದ ಗಡಿ ನಗುವನಹಳ್ಳಿ ಗೇಟ್ಗೆ ಪಾದಯಾತ್ರೆ ಆಗಮಿಸುತ್ತಿದ್ದಂತೆ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯ ಮುಖಂಡರು ರಾಹುಲ್ ಗಾಂಧಿ ಅವರನ್ನು ಅತ್ಮೀಯವಾಗಿ ಬರಮಾಡಿಕೊಂಡ್ರು. ಈ ವೇಳೆ ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಅವರು ತಳ್ಳಾಟ ನೂಕಾಟದ ಮಧ್ಯೆ ಸಿಲುಕಿ ನೆಲಕ್ಕುರುಳಿದರಲ್ಲದೆ, ಸ್ವಲ್ಪ ಮಟ್ಟಿಗೆ ಕಾಲ್ತುಳಿತಕ್ಕೂ ಒಳಗಾದ್ರು. ತಕ್ಷಣ ಪೊಲೀಸರು ಜನರನ್ನು ಚದುರಿಸಿ ಪಾದಯಾತ್ರೆಗೆ ಅನುವು ಮಾಡಿಕೊಟ್ರು.
ಇದೇ ವೇಳೆ ಸ್ಥಳೀಯ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ರಾಗಾರನ್ನು ಹೂಗುಚ್ಛ ನೀಡಿ ಬರಮಾಡಿಕೊಂಡ್ರೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಣ್ಣ ರಾಗಾರಿಗೆ ಕುರಿ ಕಂಬಳಿ ಹೊದಿಸಿ ಸನ್ಮಾನಿಸಿದ್ರು. ನಂತರ ಪಾದಯಾತ್ರೆ ಮುಂದುವರಿಸಿದ ರಾಗಾ ಹಾಗೂ ಕಾಂಗ್ರೆಸ್ ಮುಖಂಡರು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಪಾದಯಾತ್ರೆ ಮೊಟುಕುಗೊಳಿಸಿದ್ರು.
ಪಾದಯಾತ್ರೆ ಮೊಟುಕುಗೊಳಿಸಿ ತಕ್ಣ ಕಾರೇರಿದ ರಾಗಾ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದು ಶ್ರೀರಂಗಪಟ್ಟಣದ ಪರಿವರ್ತನಾ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ಊಟ ಮುಗಿಸಿ ಕೆಲಕಾಲ ವಿಶ್ರಾಂತಿ ಪಡೆದು ಮತ್ತೆ ಪಾದಯಾತ್ರೆ ಮುಂದುವರಿಸಿದರು. ಇದೇ ಸಂದರ್ಭ
ಶ್ರೀರಂಗಪಟ್ಟಣದಿಂದ ಪಾದಯಾತ್ರೆ ಆರಂಭವಾಗುತ್ತಿದ್ದಂತೆ ಪ್ರಗತಿಪರ ಚಿಂತಕಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಮತ್ತು ಟೀಂ ಪಾದಯಾತ್ರೆ ಬೆಂಬಲ ಸೂಚಿಸೊದ್ರು. ನಂತರ ಕಿರಂಗೂರು, ದರಸಗುಪ್ಪೆ ರೈಲ್ವೆ ನಿಲ್ದಾಣದ ಮೂಲಕ ಕೆನ್ನಾಳಿಗೆ ಬಂದ ರಾಗಾ ಅಲ್ಲಿನ ಕಲ್ಯಾಣ ಮಂಟಪವೊಂದರಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ನಂತರ ಪಾಂಡವಪುರ ಪಟ್ಟಣದವರೆಗೆ ಪಾದಯಾತ್ರೆ ನಡೆಸಿ ಸ್ಥಗಿತಗೊಳಿಸಿದ್ರು.
ಪಟ್ಟಣದ ಪೈಲಟ್ ಸರ್ಕಲ್ ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಗಾ 4 ಮತ್ತು 5 ರಂದು ವಿಜಯದಶಮಿ ನಿಮಿತ್ತ ಪಾದಾಯಾತ್ರೆ ಇಲ್ಲದಿರುವುದರಿಂದ ಕೊಡಗಿನ ರೆಸಾರ್ಟ್ ಕಡೆ ಪಯಣ ಬೆಳೆಸಿದ್ರು. ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ದಣಿವಾರಿಸಿಕೊಳ್ಳಲು ಎಳನೀರು, ಮಜ್ಜಿಗೆ, ಕಬ್ಬಿನ ಹಾಲು, ಕಾಫಿ, ಟೀ, ಬಜ್ಜಿ ಬೋಂಡ ವಿತರಣೆ ಮಾಡಲಾಯ್ತು.
ಪಾದಯಾತ್ರೆಯಲ್ಲಿ ಮಾಜಿ ಸಚಿವರಾದ ಎನ್. ಚೆಲುವರಾಯಸ್ವಾಮಿ, ಜಮೀರ್ ಅಹಮದ್, ಎಂ.ಎಸ್. ಆತ್ಮಾನಂದ ಸೇರಿದಂತೆ ಜಿಲ್ಲೆಯ, ಹೊರ ಜಿಲ್ಲೆಯ ಮುಖಂಡರು ರಾಗಾಗೆ ಸಾಥ್ ನೀಡಿದ್ರು. ಇನ್ನು ಸಹಸ್ರಾರು ಜನರು ಬೆಳಗ್ಗೆಯಿಂದ ಪಾದಯಾತ್ರೆಯ ಕೊನೆವರೆಗೂ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷ. ಇನ್ನು ಪಾದಯಾತ್ರೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್ಗಳು ನೋಡುಗರನ್ನು ಆಕರ್ಷಿಸಿತು. ಇನ್ನು ಅಭಿಮಾನಿಗಳು ಕನ್ನಡ ಬಾವುಟದ ಜೊತೆ ರಾಗಾ ಭಾವಚಿತ್ರವನ್ನು ಜೋಡಿಸಿ ರಸ್ತೆಯುದ್ದಕ್ಕೂ ಪ್ರದರ್ಶಿಸಿದ್ರು. ಒಟ್ಟಾರೆ ಇದೇ 6 ರಂದು ಮತ್ತೆ ಪಾದಯಾತ್ರೆ ಪಾಂಡವಪುರದಿಂದ ಮುಂದುವರೆಯುತ್ತದೆ.
ಬಾಲಕೃಷ್ಣ ಜೀಗುಂಡಿಪಟ್ಟಣ, ಪವರ್ ಟಿವಿ, ಮಂಡ್ಯ