Friday, November 22, 2024

ಜಾವೆಲಿನ್​​​ ಆಟಗಾರ ಶಿವಪಾಲ್​​ ಅಮಾನತು

ಡೋಪಿಂಗ್​ ಪ್ರಕರಣದಲ್ಲಿ ಸಿಕ್ಕಿಬಿದ್ದ ಭಾರತದ ಜಾವೆಲಿನ್ ಆಟಗಾರ ಶಿವಪಾಲ್ ಸಿಂಗ್ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ 4 ವರ್ಷ ಅಮಾನತು ಮಾಡಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ವೇಳೆ ಶಿವಪಾಲ್​ರ ಡೋಪಿಂಗ್​ ಸ್ಯಾಂಪಲ್​ ಪಡೆಯಲಾಗಿತ್ತು. ಈ ವೇಳೆ ಉದ್ದೀಪನ ಮದ್ದು ದೃಢಪಟ್ಟ ಕಾರಣ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ನಿಷೇಧಿತ ವಸ್ತುವಾದ ಮೆಥಾಂಡಿನೋನ್ ಅನ್ನು ಶಿವಪಾಲ್ ಸಿಂಗ್​ ಅವರು ಪಡೆದಿರುವುದು ಪರೀಕ್ಷೆಯಲ್ಲಿ ದೃಢಟ್ಟಿದೆ. ಇದರಿಂದ ಅವರನ್ನು ಎಲ್ಲ ಕ್ರೀಡಾಕೂಟದಿಂದ ಮುಂದಿನ 4 ವರ್ಷಗಳವರೆಗೆ ಅಮಾನತು ಮಾಡಲಾಗಿದೆ.

ಉತ್ತರ ಪ್ರದೇಶದ 27 ವರ್ಷದ ಅಥ್ಲೀಟ್‌ ಕಳೆದ ವರ್ಷ ಅಕ್ಟೋಬರ್ 21ರಿಂದಲೇ ಅಮಾನತಿನಲ್ಲಿದ್ದರು. ಇದೀಗ ಆ ಅವಧಿಯನ್ನು ಅಕ್ಟೋಬರ್ 2025ರವರೆಗೆ ವಿಸ್ತರಿಸಲಾಗಿದೆ. 2019ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಶಿವಪಾಲ್ 86.23 ಮೀ ಜಾವೆಲಿನ್​ ಎಸೆದು ಬೆಳ್ಳಿ ಪದಕವನ್ನು ಗೆದ್ದಿದ್ದರು. ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ 12 ನೇ ಸ್ಥಾನ ಪಡೆದಿದ್ದರು. ಒಲಿಂಪಿಕ್ಸ್ ನಂತರ ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ.

RELATED ARTICLES

Related Articles

TRENDING ARTICLES