Friday, November 22, 2024

ಕನ್ನಡಿಗನಿಗೆ ರಾಷ್ಟ್ರ ಪ್ರಶಸ್ತಿ​.. ನಾಲ್ಕು ವರ್ಷದ ಶಪಥ & ತಪಸ್ಸು

ಪ್ರತಿಯೊಬ್ಬರಿಗೂ ಒಂದೊಂದು ಕನಸಿರುತ್ತೆ. ಅದನ್ನ ನನಸು ಮಾಡೋರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದ್ರೆ ಇಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಹಾಕಿದ್ರೆ ಸಕ್ಸಸ್ ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪವನ್ ಒಡೆಯರ್ ಬೆಸ್ಟ್ ಎಕ್ಸಾಂಪಲ್. ಅದು ಯಾಕೆ ಏನು ಎತ್ತ ಅನ್ನೋದ್ರ ಡಿಟೈಲ್ಡ್ ಸ್ಟೋರಿ ಇಲ್ಲಿದೆ. ನೀವೇ ಓದಿ.

  • ಒಡೆಯರ್ ವಾಟ್ಸಪ್ ಡಿಪಿ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ
  • ರಾಷ್ಟ್ರಪತಿ ಮುರ್ಮುರಿಂದ ಮೂವರು ಕನ್ನಡಿಗರಿಗೆ ಪ್ರಶಸ್ತಿ
  • ಡೆಲ್ಲಿಯಲ್ಲಿ ಸದ್ದು ಮಾಡಿದ ಕರುನಾಡ ಕಲೆ ಡೊಳ್ಳು ಕುಣಿತ

68ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಡೆಲ್ಲಿಯ ರಾಷ್ಟ್ರಪತಿ ಭವನದಲ್ಲಿ ಬಹಳ ಅರ್ಥಪೂರ್ಣವಾಗಿ ನೆರವೇರಿತು. ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ನಮ್ಮ ಕನ್ನಡಿಗರಾದ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಪವನ್ ಒಡೆಯರ್ ಪ್ರಶಸ್ತಿ ಸ್ವೀಕರಿಸಿದ್ರು. ರಜತ ಕಮಲದ ಪದಕದ ಜೊತೆ ಒಂದು ಲಕ್ಷ ನಗದು ಬಹುಮಾನಕ್ಕೆ ಭಾಜನರಾದ್ರು. ಇದು ಇಡೀ ಕರುನಾಡು ಹೆಮ್ಮೆ ಪಡೋ ವಿಷಯ.

ಯೆಸ್.. ಡೊಳ್ಳು ಸಿನಿಮಾಗೆ ಉತ್ತಮ ಪ್ರಾದೇಶಿಕ ಕನ್ನಡ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಅನೌನ್ಸ್ ಆಗಿತ್ತು. ಡೊಳ್ಳು ಸಿನಿಮಾದ ಅಸಲಿ ರೂವಾರಿ ನಿರ್ಮಾಪಕ ಪವನ್ ಒಡೆಯರ್. ಸದಾ ಕಮರ್ಷಿಯಲ್ ಸಿನಿಮಾಗಳನ್ನ ಮಾಡ್ತಾ ಬೆಳೆದುಬಂದ ಅವ್ರು, ಕರುನಾಡಿನ ಗಂಡುಕಲೆ ಡೊಳ್ಳು ಕುಣಿತದ ಕುರಿತ ಸಿನಿಮಾಗೆ ಬಂಡವಾಳ ಹೂಡಿ, ಅವ್ರ ಸಿನಿಮೋತ್ಸಾಹ ಎಂಥದ್ದು ಅನ್ನೋದನ್ನ ಪ್ರೂವ್ ಮಾಡಿದ್ದಾರೆ.

ಗೋವಿಂದಾಯನಮಃ, ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮದಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ನಿರ್ದೇಶಕ ಪವನ್ ಒಡೆಯರ್ ತಮ್ಮ ಪತ್ನಿ ಅಪೇಕ್ಷಾ ಜೊತೆಗೂಡಿ ಡೊಳ್ಳು ಚಿತ್ರ ನಿರ್ಮಿಸಿದ್ರು. ಅಲ್ಲದೆ, ನಾಲ್ಕು ವರ್ಷಗಳ ಹಿಂದೆ ವಾಟ್ಸಪ್ ಡಿಪಿ ತೆಗೆದು, ನಾನು ಎಂದು ನ್ಯಾಷನಲ್ ಅವಾರ್ಡ್​ ಪಡೀತೀನೋ ಅಂದೇ ಡಿಪಿ ಹಾಕಿಕೊಳ್ಳುವೆ ಅಂತ ಶಪಥ ಮಾಡಿದ್ರಂತೆ. ಅವ್ರ ಆ ಕನಸು ನನಸಾಗಿದೆ. ಅದಕ್ಕಾಗಿ ಮಾಡಿದ ತಪಸ್ಸು ಫಲಪ್ರದವಾಗಿದೆ.

ಪವನ್ ಒಡೆಯರ್ ಜೊತೆ ಡೊಳ್ಳು ಚಿತ್ರದ ನಿರ್ದೇಶಕ ಸಾಗರ್ ಪುರಾಣಿಕ್ ಕೂಡ ರಾಷ್ಟ್ರಪತಿಗಳಿಂದ ರಜತ ಪದಕ ಸ್ವೀಕರಿಸಿದ್ರು. ಅಲ್ಲದೆ, ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿ ಅವ್ರೂ ಪ್ರಶಸ್ತಿ ಸ್ವೀಕರಿಸಿದ್ದು ಇಂಟರೆಸ್ಟಿಂಗ್. ಒಟ್ಟಾರೆ ಮೂವರು ಕನ್ನಡಿಗರು ಡೆಲ್ಲಿಯಲ್ಲಿ ಅವಾರ್ಡ್​ ಪಡೆದಿರೋದು ಖುಷಿಯ ವಿಚಾರ.

ತಮಗೆ ತಾವೇ ಚಾಲೆಂಜಸ್​ನ ಹಾಕಿಕೊಳ್ಳೋ ಪವನ್ ಒಡೆಯರ್, ನ್ಯಾಷನಲ್ ಅವಾರ್ಡ್​ ಪಡೆದಿರೋ ಖುಷಿಗಿಂತ, ಅದೇ ರೀತಿ ಮತ್ತಷ್ಟು ಶಪಥಗಳಿಂದ ಮತ್ತಿನ್ನೇನನ್ನೋ ಸಾಧಿಸೋ ಹಂಬಲದಲ್ಲಿದ್ದಾರೆ. ತಮ್ಮದೇ ನಿರ್ದೇಶನದ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್​ ಪಡೆಯೋ ಮಹತ್ವದ ನಿರ್ಧಾರ ಮಾಡಿದ್ದಾರೆ. ಇನ್ನು ಪ್ರಶಸ್ತಿಯನ್ನ ಪತ್ನಿ ಅಪೇಕ್ಷಾ ಅವ್ರಿಗೆ ಅರ್ಪಿಸಿರೋ ಅವ್ರು, ಸದ್ಯ ಬಾಲಿವುಡ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES