ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವನ್ನ ಜೆಸಿಬಿ ಘರ್ಜನೆ ನಿಲ್ಲಿಸಿದ ಹಿನ್ನಲೆಯಲ್ಲಿ ಬಿಬಿಎಂಪಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡು ಒತ್ತವರಿ ತೆರವು ಮಾಡುವಂತೆ ತಾಕೀತು ಮಾಡಿದೆ.
ಬಿಬಿಎಂಪಿ ಸೂಚನೆ ಮಾಡಿದ್ದ ಒತ್ತವರಿಯಲ್ಲಿ ಸುಮಾರು 602 ಬಾಕಿ ಇದ್ದು, ಈ ಬಗ್ಗೆ ಬಿಬಿಎಂಪಿಯಿಂದ ವಿವರ ಪಡೆದು ಹೈಕೋರ್ಟ್ ಒತ್ತುವರಿ ತೆರವು ಸರಿಯಾಗಿ ನಡೆಸುವಂತೆ ಕಿವಿಹಿಂಡಿದೆ.
ಇನ್ನು ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೆ ಮತ್ತೆ ಅಪರೇಷನ್ ಬುಲ್ಡೋಜರ್ ದಸರಾ ನಂತರ ಶುರು ಮಾಡುವ ಸಾಧ್ಯತೆ ಇದೆ. ಕೆಲವು ಕಡೆ ರಾಜಕಾಲುವೆ ಒತ್ತುವರಿ ತೆರವು ಮಾಡಿದರೆ, ಕೆಲವೆಡೆ ದೊಡ್ಡವರಿಗೆ ಹೆದರಿ ಬಿಬಿಎಂಪಿ ಕೈಬಿಟ್ಟಿತ್ತು. ಈ ಕೋರ್ಟ್ ಕಿಡಿ ಬೆನ್ನಲ್ಲೆ ಮಗದೊಮ್ಮೆ ಅಪರೇಷನ್ ಬುಲ್ಡೋಜರ್ ಗೆ ಬ್ಲ್ಯೂಪ್ರಿಂಟ್ ರೆಡಿ ಬಿಬಿಎಂಪಿ ಮಾಡುತ್ತಾ ಕಾದುನೋಡಬೇಕಿದೆ.