Friday, November 22, 2024

ಆಕ್ಸಿಜನ್ ಸಂತ್ರಸ್ತರ ಕುಟುಂಬಕ್ಕೆ​ ಸರ್ಕಾರಿ‌ ಉದ್ಯೋಗದ ಭರವಸೆ ನೀಡಿದ ಕಾಂಗ್ರೆಸ್

ಚಾಮರಾಜನಗರ: ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಆಕ್ಸಿಜನ್ ದುರಂತದಲ್ಲಿ‌ ಮೃತಪಟ್ಟವರ ಕುಟುಂಬದಲ್ಲಿ ತಲಾ ಒಬ್ಬರಿಗೆ ಸರ್ಕಾರಿ ಕೆಲಸ ನೀಡಲಾಗುವುದೆಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಗುಂಡ್ಲುಪೇಟೆಯ ಶನೈಶ್ವರ ‌ದೇವಸ್ಥಾನದ ಬಳಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಆಶ್ವಾಸನೆ ನೀಡಲಾಯಿತು. ಈ ವೇಳೆ ಸಂತ್ರಸ್ತರು ಅಳಲು ತೋಡಿಕೊಂಡರು. ನಾವು ಸೂಕ್ತ ಪರಿಹಾರ ಕೊಡಿಸುವುದಕ್ಕೆ ಬೆಂಬಲ ನೀಡುತ್ತೇವೆ ಎಂದರು.

ಸೋಲಿಗರ ಬುಡಕಟ್ಟು ಅಭಿವೃದ್ಧಿ ಸಂಘದವರು, ಅರಣ್ಯ ಹಕ್ಕು ಕಾಯ್ದೆಯಡಿ ಬಂಡೀಪುರದಲ್ಲಿ ಅರಣ್ಯ ಕಿರು ಉತ್ಪನ್ನ ಸಂಗ್ರಹಣೆಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡರು. ಮಲೆ‌ ಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ‌‌ಸಂರಕ್ಷಿತಾರಣ್ಯ ಪ್ರದೇಶ ಮಾಡಿದರೆ ಜನರಿಗೆ ತೊಂದರೆಯಾಗಲಿದೆ ಎಂದರು. ಸೋಲಿಗರಿಗೆ ರಾಜಕೀಯ ಪ್ರಾತಿನಿಧ್ಯ ಬೇಕು ಎಂದು ಈ ವೇಳೆ ಮನವಿ ಮಾಡಿದರು.

ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಸೋಲಿಗರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು. ಇನ್ನು ಈ ಸಂವಾದದಲ್ಲಿ ಭಾಗವಹಿಸಿದ್ದ ಎಚ್.ಡಿ.ಕೋಟೆಯ ಜೇನುಕುರುಬರು ರಾಹುಲ್‌ಗಾಂಧಿಗೆ‌ ಜೇನು‌ ತುಪ್ಪ ಕೊಟ್ಟರು.

RELATED ARTICLES

Related Articles

TRENDING ARTICLES