ಚಾಮರಾಜನಗರ: ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಯುತ್ತದೆ. ಈ ಯಾತ್ರೆ ಸಂವಿಧಾನದ ರಕ್ಷಣೆ ಯಾತ್ರೆಯಾಗಿದೆ. ಸಂವಿಧಾನ ಇಲ್ಲ ಅಂದ್ರೆ ನಮ್ಮ ತ್ರಿವರ್ಣ ಧ್ವಜ ಕೂಡ ಇರೋದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಬಿಸಿಲು, ಮಳೆ ಎನ್ನದೆ ಭಾರತ್ ಜೋಡೋ ಪಾದಯಾತ್ರೆ ನಡೆಯುತ್ತಿದೆ. ಬೆಳಿಗ್ಗೆ 6 ರಿಂದ ಸಂಜೆ 6 ವರೆಗೆ ಭಾಗವಹಿಸಿದ್ದೇವೆ. ನಾನೊಬ್ಬನೇ ಪಾದಯಾತ್ರೆ ಮಾಡ್ತಿಲ್ಲ, ಲಕ್ಷಾಂತರ ಮಂದಿ ನನ್ನ ಜತೆಗೆ ನಡೆಯುತ್ತಿದ್ದಾರೆ. ಈ ಯಾತ್ರೆಯಲ್ಲಿ ದ್ಷೇಷ, ಹಿಂಸೆ ಎಲ್ಲೂ ಕಾಣುತ್ತಿಲ್ಲ. ಈ ಪಾದಯಾತ್ರೆಯಲ್ಲಿ ಕೆಳಗಡೆ ಬಿದ್ದವರನ್ನ ಮೇಲೆತ್ತಿ ಕರೆತರುತ್ತಿದ್ದೇವೆ. ಎಲ್ಲಾ, ಜಾತಿ, ಭಾಷೆಯವರು ಭಾಗವಹಿಸುತ್ತಾರೆ ಎಂದು ಯಾತ್ರೆ ಉದ್ದೇಶಿಸಿ ಮಾತಾನಾಡಿದರು.
ಈ ಪಾದಯಾತ್ರೆಯನ್ನ ಯಾರು ನಿಲ್ಲಿಸಲು ಸಾಧ್ಯವಿಲ್ಲ. ಪಾದಯಾತ್ರೆ ಮೂಲ ಉದ್ದೇಶ ದೇಶದಲ್ಲಿ ಆರ್ಎಸ್ಎಸ್, ಬಿಜೆಪಿ ಕೋಮುವಾದ ಬಿತ್ತರಿಸುವುದನ್ನ ತಡೆಯೋದೆ ಉದ್ದೇಶ. ಪಾದಯಾತ್ರೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ, ರೈತರ ದಬ್ಬಾಳಿಕೆ, ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ಮಾರುತ್ತಿರೋದನ್ನ ಯಾತ್ರೆಯ ಉದ್ದಕ್ಕೂ ಹೇಳುತ್ತಿದ್ದಾರೆ. ಪಾದಯಾತ್ರೆ ಉದ್ದೇಶ ಭಾಷಣ ಮಾಡಲು ಅಲ್ಲ. ಜನರ ಅಭಿಪ್ರಾಯ ಸಂಗ್ರಹ ಮಾಡಲು ಎಮದರು.
ಜನರ ಕಷ್ಟಗಳನ್ನ ಹೇಳಲು ವಿಧಾನ ಸಭೆ ನಡೆಸಲು ಬಿಡುವುದಿಲ್ಲ. ಸಂಸತ್ ನಲ್ಲಿ ಮಾತನಾಡಿದ್ರೆ ಮೈಕ್ ಬಂದ್ ಮಾಡ್ತಾರೆ. ಹೀಗಾಗಿ ಜನ ಸಾಮಾನ್ಯರ ಜೊತೆ ನಡೆಯುತ್ತೇವೆ. ಈ ಪಾದಯಾತ್ರೆಯಲ್ಲಿ ಯಾರನ್ನೂ ತಡೆಯಲು ಸಾಧ್ಯವಿಲ್ಲ. ಯಾತ್ರೆಯಲ್ಲಿ ಭಾರತ ದೇಶದ ಧ್ವನಿ ತಡೆಯಲು ಆಗುವುದಿಲ್ಲ. ಕರ್ನಾಟಕದಲ್ಲಿ ಭ್ರಷ್ಟಾಚಾರ, ನಿರುದ್ಯೋಗ ಎಲ್ಲವನ್ನೂ ಈ ಪಾದಯಾತ್ರೆಯಲ್ಲಿ ಕೇಳಬಹುದು ಎಂದು ರಾಹುಲ್ ಗಾಂಧಿ ತಿಳಿಸಿದರು.