ಗುಜರಾತ್ : ಅಧಿಕಾರಿಗಳು, ಜನ ಪ್ರತಿನಿಧಿಗಳು ಕಳಪೆ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡು ಜನರ ಜೀವಕ್ಕೆ ಕಂಟಕವಾಗ್ತಿದ್ದಾರೆ. ಟೆಂಡರ್ ಪಡೆದ ಹಣದಲ್ಲಿ ಇಂತಿಷ್ಟು ಪರ್ಸೆಂಟ್ ಪಡೆದು ಅಲ್ಪ ಹಣವನ್ನು ಕಾಮಗಾರಿಗೆ ವಿನಿಯೋಗಿಸಿ ಕಳಪೆ ಕಾಮಗಾರಿ ಮಾಡ್ತಾರೆ.
ಗುಜರಾತ್ನಲ್ಲಿ ಪ್ಲೈಓವರ್ ನಿರ್ಮಾಣ ಮಾಡಿದ್ದು, ಮೇಲ್ಸೇತುವೆ ಉದ್ಘಾಟಿಸುವ ಮುನ್ನವೇ ಕುಸಿದು ಬಿದ್ದಿದೆ. ಕಾಮಗಾರಿ ನಡೆಸಲಾಗ್ತಿದ್ದು, ಕಾಮಗಾರಿ ಚಾಲ್ತಿಯಲ್ಲಿರುವಾಗಲೇ ಸೇತುವೆ ಕುಸಿದಿದೆ. ಕೆಳಗಿನ ರಸ್ತೆಯಲ್ಲಿ ವಾಹನಗಳು, ಜನರು ಓಡಾಡ್ತಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಇನ್ನು, ಸೇತುವೆ ಒಂದೆಡೆಗೆ ವಾಲಿದ್ದು, ದಢಾರನೆ ನೆಲಕ್ಕುರುಳಿದೆ. ಸೇತುವೆ ಕೆಳಕ್ಕುರುತ್ತಿರುವ ದೃಶ್ಯ ಪ್ರಯಾಣಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಧಿಕಾರಿಗಳ ಲಂಚಬಾಕತನಕ್ಕೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.