Thursday, October 31, 2024

ಶಿವಮೊಗ್ಗದಲ್ಲಿ ಕಣ್ಮನ ಸೆಳೆದ ಕೆಸರು ಗದ್ದೆ ಓಟ

ಶಿವಮೊಗ್ಗ : ಸುತ್ತಲೂ ಓಡೋ ಓಡೋ ಓಡೋ ಎಂಬ ಕೂಗು,ಎದ್ನೋ ಬಿದ್ನೋ ಎಂದು ಕೆಸರಿನಲ್ಲೇ ಓಡುತ್ತಿರುವ ಮಕ್ಕಳು, ಯುವಕ-ಯುವತಿಯರು, ದೊಡ್ಡವರು ನೋಡಲು ಬಂದವರು ಕೂಡ ಹೆಸರು ನೊಂದಾಯಿಸಿ ಕೆಸರಿನಲ್ಲಿ ಓಡಿ ಸೈ ಎನಿಸಿಕೊಂಡ ಜನರು, ಹೌದು, ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ಮಲವಗೊಪ್ಪ ಬಡಾವಣೆಯ ಶಿವಮೊಗ್ಗ – ಭದ್ರಾವತಿ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಗದ್ದೆಯಲ್ಲಿ ನಾಡ ಹಬ್ಬ ದಸರಾ ಅಂಗವಾಗಿ ಕೆಸರು ಗದ್ದೆ ಓಟ ಹಮ್ಮಿಕೊಳ್ಳಲಾಗಿತ್ತು. ಮೇಯರ್ ಸುನಿತಾ ಅಣ್ಣಪ್ಪ ಈ ಸ್ಪರ್ಧೆಗೆ ಚಾಲನೆ ನೀಡಿದ್ರು. ಇತ್ತ ಚಾಲನೆ ನೀಡಿದ್ದೆ ತಡ, ಹೆಸರು ನೊಂದಾಯಿಸಿದ್ದ ಸ್ಪರ್ಧಾಳುಗಳು, ಎದ್ನೋ, ಬಿದ್ನೋ ಎಂದು ಓಟ ಕಿತ್ತರು.

ಇನ್ನು ಇತ್ತ ಕೆಸರುಗದ್ದೆ ಓಟದಲ್ಲಿ ಎಲ್ಲಾ ವಯೋಮಾನದ ಸ್ಪರ್ಧಾಳುಗಳು ಪಾಲ್ಗೊಂಡು ಫುಲ್ ಎಂಜಾಯ್ ಮಾಡಿದ್ರು. ಬಳಿಕ ಹಗ್ಗ-ಜಗ್ಗಾಟದಲ್ಲಿಯೂ, ಮಹಿಳೆಯರು, ಯುವತಿಯರು, ಮಕ್ಕಳು, ಯುವಕರು ಎಲ್ಲರೂ ಪಾಲ್ಗೊಂಡು ಸಖತ್ ಎಂಜಾಯ್ ಮಾಡಿದ್ರು. ಗೆದ್ದವರಿಗೆ ಬಹುಮಾನ ಕೂಡ ವಿತರಿಸಲಾಯಿತು.

ಒಟ್ಟಾರೆ, ಗ್ರಾಮೀಣ ಕ್ರೀಡೆ ಮರೆತಿರುವ ಜನರಿಗೆ ಇದನ್ನೆಲ್ಲಾ ಜ್ಞಾಪಿಸಲೆಂದೇ ಶಿವಮೊಗ್ಗ ಮಹಾನಗರ ಪಾಲಿಕೆಯು, ನಾಡಹಬ್ಬ ದಸರಾ ಅಂಗವಾಗಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಿದ್ದು ಅರ್ಥಗರ್ಭಿತವಾಗಿತ್ತು.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ.

RELATED ARTICLES

Related Articles

TRENDING ARTICLES