ಹಾವೇರಿ : K.M.F ಯೂನಿಯನ್ ಕಚೇರಿ ಉದ್ಘಾಟನೆಗೆ ಬಂದಿದ್ದೇನೆ. ಬಜೆಟ್ನಲ್ಲಿ ಅನೌನ್ಸ್ ಮಾಡಿದಂತೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬಂದಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಜೆಟ್ನಲ್ಲಿ ಹೇಳಿದಂತೆ ಕಾರ್ಯಾರಂಭ ಮಾಡಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, PFI ಬ್ಯಾನ್ ಬಗ್ಗೆ ನಿನ್ನೆ ಉತ್ತರ ಕೊಟ್ಟಿದ್ದೇನೆ. PFIಯನ್ನು ಈಗಾಗಲೇ ಬ್ಯಾನ್ ಮಾಡಲಾಗಿದೆ. SDPI ರಿಜಸ್ಟರ್ಡ್ ಪೊಲಿಟಿಕಲ್ ಪಾರ್ಟಿ. ಹೀಗಾಗಿ ಅದಕ್ಕೆ ಅದರದೇ ಆದಂತ ಕಾನೂನುಗಳಿವೆ. ಮುಂದಿನ ದಿನಗಳಲ್ಲಿ ಅವುಗಳ ಕಾರ್ಯ ವೈಖರಿ ನೋಡಿ ಕ್ರಮ ತಗೊಳ್ತೀವಿ ಎಂದು ತಿಳಿಸಿದರು.
ಇನ್ನು, ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಫ್ಲೆಕ್ಸ್ ಹರಿದು ಹಾಕಿದ ವಿಚಾರಕ್ಕೆ KPCC ಅಧ್ಯಕ್ಷ D.K. ಶಿವಕುಮಾರ್ ಕಿಡಿ ಕಾರಿದ್ರು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಮೊದಲೇ ಪರ್ಮಿಷನ್ ತಗೊಂಡು ಫ್ಲೆಕ್ಸ್ ಹಾಕಬೇಕು. ಸುಖಾಸುಮ್ಮನೆ ಯಾವ ಪಕ್ಷದ ಫ್ಲೆಕ್ಸ್ ಹರಿಯುವಂತ ಅವಶ್ಯಕತೆ ನಮಗಿಲ್ಲ ಎಂದ್ರು. ಭಾರತ್ ಜೋಡೋಗೆ ಸಾಹಿತಿಗಳು ಬೆಂಬಲ ನೀಡುತ್ತಿರುವ ವಿಚಾರ ಸಂಬಂಧ ಮಾತನಾಡಿ, ಸಾಹಿತಿಗಳು ಎರಡೂ ಕಡೆಯೂ ಇದ್ದಾರೆ. ಕೆಲವು ವಿಚಾರದಲ್ಲಿ ಅಲ್ಲೂ ಬೆಂಬಲ ನೀಡ್ತಾರೆ. ಕೆಲವು ವಿಚಾರದಲ್ಲಿ ಇಲ್ಲಿಯೂ ಬೆಂಬಲ ನೀಡ್ತಾರೆ ಎಂದು ಹೇಳಿದರು.