Monday, November 25, 2024

ಜಂಬೂ ಸವಾರಿಗೂ ಮೊದಲೇ ಮುರಿದು ಬಿದ್ದ ಕಳಸ

ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಾಡದೇವತೆಗೆ ವಿಶೇಷ ಪೂಜೆ ನಡೆಯಿತು. ಅಲ್ಲದೆ, ಯುವತಿಯರು ಯುವಕರು ಸೇರಿ ವಿವಿಧ ರೀತಿಯ ನೃತ್ಯಗಳಿಗೆ ಹೆಜ್ಜೆ ಹಾಕಿದರು. ಬೇರೆ ರೀತಿಯ ವೇಷಗಳನ್ನು ಕೂಡ ಧರಿಸಿದ್ದರು. ಹುಲಿ ವೇಷ ಸೇರಿ ವಿಶೇಷ ರೀತಿ ಗಮನ ಸೆಳೆದರು.

ಇನ್ನು ಈ ಸಂಭ್ರಮದ ನಡುವೆಯೇ ಒಂದು ಅಚಾತುರ್ಯವೂ ನಡೆದು ಹೋಯಿತು. ಜಂಬೂ ಸವಾರಿಗೂ ಮೊದಲೇ ಅಂಬಾರಿ ಕಳಶ ಮುರಿದು ಬಿದ್ದಿದೆ. ಪಂಚಲೋಹದ ಚಾಮುಂಡೇಶ್ವರಿ ವಿಗ್ರಹವಿರುವ ಮರದ ಅಂಬಾರಿಯನ್ನು ಬನ್ನಿ ಮಂಟಪದಿಂದ ಆನೆ ಮೇಲೆ ಕೂರಿಸುವ ವೇಳೆ ಈ ಘಟನೆ ನಡೆದಿತ್ತು ಬಳಿಕ ಆನೆ ಮೇಲೆ ಕೂರಿಸಿದ ನಂತರವೂ ಕೂಡ ಕಳಶ ಬಿದ್ದಿದೆ. ಕ್ರೇನ್ ಮೂಲಕ ಮೇಲೆತ್ತುವಾಗ ಕಳಶ ಮುರಿದು ಹೋಗಿದೆ.

RELATED ARTICLES

Related Articles

TRENDING ARTICLES