Friday, November 22, 2024

ಬೆಂಗಳೂರು to ಮೈಸೂರು ಜಗ್ಗಣ್ಣ ತೋತಾಪುರಿ ಎಕ್ಸ್​​ಪ್ರೆಸ್

ಮೈಸೂರು ದಸರಾ ಉತ್ಸವದಲ್ಲೆಲ್ಲಾ ತೋತಾಪುರಿಯದ್ದೇ ಘಮಲು. ಜಗ್ಗೇಶ್ ಜೊತೆ ಅದಿತಿ ಅನ್ನೋ ಅಮಲು. ಯೆಸ್.. ಡೇ ಒನ್​ನಿಂದ ಡಿಫರೆಂಟ್ ಪ್ರೊಮೋಷನ್ಸ್ ಮಾಡಿಕೊಂಡು ಬಂದಂತಹ ಟೀಂ ತೋತಾಪುರಿ, ಬೆಂಗಳೂರು ಟು ಮೈಸೂರ್​ಗೆ ತೋತಾಪುರಿ ರೈಲೇ ಓಡಿಸಿಬಿಡ್ತು. ಅದ್ರಲ್ಲಿ ಜಗ್ಗಣ್ಣ- ಅದಿತಿ ಸಮೇತ ಡೈರೆಕ್ಟರ್, ಪ್ರೊಡ್ಯೂಸರ್ ಕೂಡ ಮಾಧ್ಯಮ ಮಿತ್ರರ ಜೊತೆ ಪ್ರಯಾಣ ಮಾಡಿದ್ದು ಇಂಟರೆಸ್ಟಿಂಗ್.

  • ಅದಿತಿ ಅಮಲು ಜೊತೆ ದಸರಾದಲ್ಲಿ ತೋತಾಪುರಿ ಘಮಲು
  • ಹೋಗ್ತಾ ಟ್ರೈನು.. ಬರ್ತಾ ಬಸ್.. ಮಧ್ಯೆ ಚಾಮುಂಡಿ ದರ್ಶನ
  • ಮ್ಯಾಂಗೋ ಇಲ್ಲ ಅಂತ ಪೇರಳೆ ಹಣ್ಣನ್ನೇ ಕೊಡಿಸಿದ ಜಗ್ಗೇಶ್

ಯೆಸ್.. ಇದು ತೋತಾಪುರಿ ಪ್ರೊಮೋಷನಲ್ ಪ್ಲ್ಯಾನ್. ಅರೇ ಈ ರೀತಿ ಶ್ರೀಸಾಮಾನ್ಯರಂತೆ ಸ್ಟಾರ್​ಗಳೇ ಟ್ರೈನು ಹತ್ತಿ ಸಿನಿಮಾ ಪತ್ರಕರ್ತರ ಜೊತೆ ಮೈಸೂರು ಬಂದ್ರಾ ಅಂತ ಹುಬ್ಬೇರಿಸಬೇಡಿ. ಇದು ಅಕ್ಷರಶಃ ನಿಜ. ನವರಸ ನಾಯಕ ಜಗ್ಗೇಶ್ ಹಾಗೂ ನಟಿ ಅದಿತಿ ಪ್ರಭುದೇವ ತಮ್ಮ ಡೈರೆಕ್ಟರ್ ವಿಜಯ್ ಪ್ರಸಾದ್ ಹಾಗೂ ನಿರ್ಮಾಪಕ ಕೆ.ಎ. ಸುರೇಶ್ ಜೊತೆಗೂಡಿ ಯಶವಂತಪುರ ಟು ಮೈಸೂರ್ ಟ್ರಾವೆಲ್ ಮಾಡಿದ್ರು.

ಇಡೀ ಟ್ರೈನ್​​ ತೋತಾಪುರಿ ಪೋಸ್ಟರ್​ಗಳಿಂದ ತುಂಬಿತ್ತು. ಅದೇ ಈ ಟ್ರೈನ್​ನ ಸ್ಪೆಷಾಲಿಟಿ. ನಿರ್ಮಾಪಕರು ಬಹಳ ಯುನಿಕ್ ಪ್ರೊಮೋಷನ್ಸ್ ಮಾಡ್ತಿದ್ದು, ಅದ್ರಲ್ಲಿ ಇದು ಕೂಡ ಒನ್ ಆಫ್ ದಿ ಸಕ್ಸಸ್​​ಫುಲ್ ಇವೆಂಟ್ ಅನಿಸಿತು. ವೈಟ್ ಅಂಡ್ ವೈಟ್​ನಲ್ಲಿ ರಾಜಕಾರಣಿಯಂತೆ ಬಂದ ನವರಸನಾಯಕನಿಗೆ ಸ್ಟೇಷನ್​ನಲ್ಲೇ ಸಾಕಷ್ಟು ಮಂದಿ ಸೆಲ್ಫಿಗಳಿಗೆ ಮುಗಿಬಿದ್ದರು. ಒಂದಷ್ಟು ಮಂದಿ ಬಳಿ ಫೋನ್ ತೆಗೆದು ಅವ್ರೇ ಫೋಟೋ ಕ್ಲಿಕ್ಕಿಸಿಕೊಟ್ರು.

ರೈಲ್ವೇನಲ್ಲಿದ್ದ ಒಂದಷ್ಟು ಸಮಸ್ಯೆಗಳನ್ನ ಅಲ್ಲಿದ್ದ ಸಿಬ್ಬಂದಿ ಜಗ್ಗೇಶ್ ಅವ್ರ ಗಮನಕ್ಕೆ ತಂದರು. ಇನ್ನು ಮಾಧ್ಯಮ ಮಿತ್ರದ ಜೊತೆ ಹಾಡು, ಹರಟೆ ಹೊಡೆಯುತ್ತಾ ಪಯಣ ಬೆಳೆಸಿದ ತೋತಾಪುರಿ ಟೀಂ, ಸ್ಟೇಷನ್​​ಗಳಲ್ಲಿ ಕನ್ನಡ ಕಲಾಭಿಮಾನಿಗಳ ಪ್ರೀತಿ, ಅಭಿಮಾನ ಸ್ವೀಕರಿಸಿದ್ರು. ಅನ್ ಸೀಸನ್ ಆಗಿರೋದ್ರಿಂದ ಮಾವಿನ ಹಣ್ಣಿನ ಬದಲಿಗೆ ಪೇರಳೆ ಹಣ್ಣನ್ನೇ ಕೊಂಡು ಎಲ್ಲರಿಗೂ ನೀಡಿ, ತಾವೂ ಚಪ್ಪರಿಸಿದ್ರು ಜಗ್ಗಣ್ಣ.

ಅಷ್ಟರಲ್ಲೇ ಮೈಸೂರ್ ರೈಲ್ವೇ ಸ್ಟೇಷನ್ ಬಂತು. ನಂತ್ರ ಅಲ್ಲೊಂದಷ್ಟು ಜನ ಮುತ್ತಿಕೊಂಡರು. ಅದಾದ ಬೀದಿ ದೀಪಗಳಿಂದ ಹಾಡು ಹಗಲಾಗಿದ್ದ ಅರಮನೆ ನಗರಿಯಲ್ಲಿ ಹಾದು, ತಾಯಿ ಚಾಮುಂಡಿ ಬೆಟ್ಟ ತಲುಪಲಾಯ್ತು. ನವರಾತ್ರಿ ವಿಶೇಷ ಸಿಕ್ಕಾಪಟ್ಟೆ ರಶ್ ಇದ್ರೂ ಸಹ, ನುಸುಳಿಕೊಂಡು ಹೋಗಿ ಅಮ್ಮನವರ ಆಶೀರ್ವಾದ ಮಾಡಿಬಂತು ಟೀಂ. ನಂತ್ರ ಊಟ ಸಿವಿದು ತೋತಾಪುರಿ ಸ್ಪೆಷಲ್ ಬಸ್​ನಲ್ಲಿ ಬೆಂಗಳೂರಿಗೆ ವಾಪಸ್ ಬರಲಾಯ್ತು.

ಇದು ನಿಜಕ್ಕೂ ವಿಭಿನ್ನ ಅನುಭವವೇ ಸರಿ. ಸಿನಿಮಾ ಕೂಡ ಇಂಥದ್ದೇ ವೆರೈಟಿ ಅನುಭವ ನೀಡಲಿದೆ. ಕಾರಣ ಇದು ಬರೀ ಮನರಂಜನೆ ಅಷ್ಟೇ ಅಲ್ಲ, ಮನೋವಿಕಾಸ ನೀಡಬಲ್ಲ ಸಂದೇಶಾತ್ಮಕ ಸಿನಿಮಾ ಕೂಡ ಹೌದು. ಭಾವೈಕ್ಯತೆಯ ಸಂದೇಶ ಸಾರುವ ತೋತಾಪುರಿಯಲ್ಲಿ ಬಹುತಾರಾಗಣ ಹಾಗೂ ಜಾತಿ, ಮತಗಳನ್ನ ಮೀರಿದ ಮಾನವೀಯ ಮೌಲ್ಯಗಳು, ಸಂಬಂಧಗಳ ನೆಲಗಟ್ಟು ಇದೆ.

ಡಾಲಿ, ಸುಮನ್ ರಂಗನಾಥ್, ದತ್ತಣ್ಣ ಹೀಗೆ ಸಾಕಷ್ಟು ಮಂದಿ ಕಲಾವಿದರಿದ್ದು, ಟ್ರೈಲರ್ ಹಾಗೂ ಸಾಂಗ್ಸ್ ಮಸ್ತ್ ಮ್ಯಾಜಿಕ್ ಮಾಡ್ತಿವೆ. ವಿಜಯ್ ಪ್ರಸಾದ್​ ಅವ್ರು ವಿಜಯದ ಹಾದಿಯಲ್ಲೇ ಒಳ್ಳೆಯ ಪ್ರಸಾದ ನೀಡೋ ಮನ್ಸೂಚನೆ ನೀಡಿದ್ದಾರೆ. ಕನ್ನಡದ ಜೊತೆ ಐದು ಭಾಷೆಯಲ್ಲಿ ಪ್ಯಾನ್ ವರ್ಲ್ಡ್​ ರಿಲೀಸ್ ಆಗ್ತಿರೋ ತೋತಾಪುರಿ, ಸಕ್ಸಸ್​​ಫುಲ್ ನಿರ್ಮಾಪಕ ಸುರೇಶ್ ಅವ್ರ ಕರಿಯರ್​ಗೆ ಬಿಗ್ ಟ್ವಿಸ್ಟ್ ನೀಡಲಿದೆ. ಇದೇ ಶುಕ್ರವಾರ ಸಿನಿಮಾ ತೆರೆಗೆ ಬರ್ತಿದ್ದು, ಕಣ್ಣಿಂದ ತೊಟ್ಟು ಕಿತ್ತು, ವಾಟೆ ಕವರೋದನ್ನ ಮಿಸ್ ಮಾಡ್ಕೋಬೇಡಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES