Friday, November 22, 2024

ನಾಡಹಬ್ಬದಲ್ಲಿ ರಾರಾಜಿಸಿದ 50 ಅಡಿ ಅಪ್ಪು ಕಟೌಟ್

ಮೈಸೂರು : ನವರಾತ್ರಿಯ‌ ಮೂರನೇ ದಿನವಾದ ಬುಧವಾರ ಮೈಸೂರಿನಲ್ಲಿ ಹಲವು ಕಾರ್ಯಕ್ರಮಗಳು ಮೇಳೈಸಿವೆ.ದಸರಾ ಮಹೋತ್ಸವದ ಹಲವು ಕಾರ್ಯಕ್ರಮಗಳಲ್ಲಿ ಅಪ್ಪು ಹವಾ ಶುರುವಾಗಿದೆ.ಪುನೀತ್ ಹೆಸರಲ್ಲಿ ಚಲನಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪುನೀತ್ ನಟನೆಯ ಬೆಟ್ಟದ ಹೂ, ರಾಜಕುಮಾರ, ರಣವಿಕ್ರಮ, ಯುವರತ್ನ ಚಿತ್ರ ಪ್ರದರ್ಶನದ ಮೂಲಕ ಅಪ್ಪುಗೆ ನುಡಿನಮನ ಸಲ್ಲಿಸಲಾಯಿತು. ನಗರದ ಐನಾಕ್ಸ್ ಚಿತ್ರಮಂದಿರದಲ್ಲಿ ನಡೆದ ಅಪ್ಪು ಚಲನಚಿತ್ರೋತ್ಸವಕ್ಕೆ ಪುನಿತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಚಾಲನೆ ನೀಡಿದ್ರು. ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅಭಿಮಾನಿಗಳ ಜೊತೆ ಕೂತು ಕೆಲಕಾಲ ರಾಜಕುಮಾರ ಸಿನಿಮಾ ವೀಕ್ಷಣೆ ಮಾಡಿದ್ರು.

ಅಲ್ಲದೇ ಯುವದಸರಾ ಆರಂಭ ಹಿನ್ನೆಲೆ ಮಹಾರಾಜ ಕಾಲೇಜು ಮೈದಾನದಲ್ಲಿ ಅಪ್ಪು ಡ್ಯಾನ್ಸ್ ಮಾಡುವ ಬೃಹತ್ ಕಟೌಟ್ ನಿರ್ಮಾಣ ಮಾಡಲಾಗಿದೆ. ಬೆಂಗಳೂರು ಮೂಲದ ಅಪ್ಪು ಅಭಿಮಾನಿ ಮಾರುತಿ ಪುನೀತ್ ನೃತ್ಯ ಮಾಡುವ 50 ಅಡಿಯ ಬೃಹತ್ ಕಟೌಟ್ ನಿರ್ಮಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ. ಇದು ಅಪ್ಪು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಯುವದಸರಾ ಕಾರ್ಯಕ್ರಮವನ್ನು ಪುನೀತ್ ಪತ್ನಿ ಅಶ್ವನಿ ಪುನೀತ್ ರಾಜಕುಮಾರ್ ಉದ್ಘಾಟಿಸಲಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕರಾದ, ವಿಜಯಪ್ರಕಾಶ್, ಗುರುಕಿರಣ್ ಹಾಗೂ ಕುನಾಲ್ ಗಾಂಜಾವಾಲರಿಂದ ಅಪ್ಪುಗೆ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದಕ್ಕೆ ವೇದಿಕೆ ಸಿದ್ದವಾಗಿದೆ.

ಒಟ್ಟಾರೆ ಸಾಂಸ್ಕೃತಿಕ ನಗರಿಯಲ್ಲಿ ಯುವ ದಸರಾ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಯುವಸಮೂಹವನ್ನು ಹುಚ್ಚೆದ್ದು ಕುಣಿಯುವಂತೆ ಮಾಡಲಿದೆ.

ಸುರೇಶ್ ಹಾಗೂ ಸ್ವಾತಿ ಫುಲಗಂಟಿ ಪವರ್ ಟಿವಿ ಮೈಸೂರು

RELATED ARTICLES

Related Articles

TRENDING ARTICLES