ಹೈದರಾಬಾದ್ : ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಾಯಿ ಅನಾರೋಗ್ಯದ ಕಾರಣದಿಂದಾಗಿ ಇಂದು ಬೆಳ್ಳಿಗ್ಗೆ 4 ಗಂಟೆಗೆ ನಿಧಾನರಾಗಿದ್ದಾರೆ.
ಇನ್ನು, ಇಂದಿರಾದೇವಿ ಅವರ ಪಾರ್ಥಿವ ಶರೀರವನ್ನು ಪದ್ಮಾಲಯ ಸ್ಟುಡಿಯೋದಲ್ಲಿ ಬೆಳಗ್ಗೆ 9ರಿಂದ ಮಧ್ಯಾನ 12 ಗಂಟೆಯವರೆಗೆ ಅಂತಿಮ ನಮನ ಸಲ್ಲಿಸಲಾಗುವುದು. ಹಿರಿಯ ನಟ ಕೃಷ್ಣ ಅವರ ಪತ್ನಿ ಮತ್ತು ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಅವರ ನಿಧನಕ್ಕೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.