Tuesday, November 5, 2024

ತಂತ್ರಜ್ಞಾನದ ಸಬಲೀಕರಣ ಜ್ಞಾನದ ಭಂಡಾರವನ್ನೇ ತೆರೆಯಲಿದೆ: ಸಿಎಂ ಬೊಮ್ಮಾಯಿ

ಧಾರವಾಡ: ತಂತ್ರಜ್ಞಾನದ ಸಬಲೀಕರಣ ಎಲ್ಲಕ್ಕಿಂತ ಶಕ್ತಿಶಾಲಿ. ಜ್ಞಾನದ ಭಂಡಾರವನ್ನೇ ಇದು ತೆರೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ-ಧಾರವಾಡ) ನೂತನ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.

ಪ್ರತಿ ವೈಜ್ಞಾನಿಕ ಸಂಶೋಧನೆ ಮನುಕುಲದ ಏಳಿಗೆಗೆಂದೇ ನಡೆಯಬೇಕು.ಪ್ರತಿ ವೈಜ್ಞಾನಿಕ ಸಂಶೋಧನೆ ಮನುಕುಲದ ಏಳಿಗೆಗೆಂದೇ ನಡೆಯಬೇಕು ಎಂದರು. ಐಐಐಟಿ ಅವಶ್ಯಕತೆ ನಮಗಿದೆ. ಭಾರತ ಅಭಿವೃದ್ಧಿಶೀಲ ದೇಶ. ನಮ್ಮ ಶಕ್ತಿ ನಮ್ಮ ಮಾನವ ಸಾಮರ್ಥ್ಯ. ಅದನ್ನು ಹೆಚ್ಚಿಸಿದರೆ ನಮ್ಮ ದೇಶಕ್ಕೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಭವಿಷ್ಯವಿದೆ.

ಐಟಿ, ಬಿಟಿ, ಕೃತಕ ಬುದ್ದಿಮತ್ತೆ, ಇವುಗಳೆಲ್ಲಾ ನಮ್ಮ ಮಾನವ ಸಾಮರ್ಥ್ಯಗಳ ಸುಧಾರಣೆಗೆ ಸಹಕಾರಿಯಾಗಲಿದೆ. ಕಲಿಕೆ, ಶಿಕ್ಷಣದ ಮೂಲಕ ದೇಶವನ್ನು ಮುನ್ನಡೆಸಲು ಸಾಧ್ಯವಾಗಲಿದೆ. ಅದಕ್ಕಾಗಿಯೇ ಪ್ರಧಾನಮಂತ್ರಿಗಳು ಇದಕ್ಕೆ ಒತ್ತು ನೀಡಿದ್ದಾರೆ. ನಮ್ಮ ಜನಸಂಖ್ಯೆಯನ್ನು ವರವಾಗಿ ಪರಿವರ್ತನೆ ಮಡುವ ಜನನಾಯಕ ನಮ್ಮ ಪ್ರಧಾನಿಗಳು. ದೇಶದಲ್ಲಿ ಶೇ 46% ಯುವಜನಾಂಗವಿದೆ. ಅಗಾಧವಾದ ಶಕ್ತಿ ಅವರಲ್ಲಿದೆ. ಯುವಕರು ಬೆಳೆದು ದೇಶವನ್ನು ಬೆಳಸಬೇಕು ಎಂದರು.

ಭಾರತದ ಭವಿಷ್ಯದ ಕೇಂದ್ರದಲ್ಲಿ ನಾವಿದ್ದೇವೆ. ಕರ್ನಾಟಕದಲ್ಲಿ ಮೂಲ ವಿಜ್ಞಾನ, ತಂತ್ರಜ್ಞಾನದ ಬುನಾದಿಯನ್ನು ಅತ್ಯಂತ ಭದ್ರವಾಗಿ ಹಾಕಲಾಗಿದೆ. ಬೇರ್ಯಾವ ರಾಜ್ಯದಲ್ಲಿಯೂ ಇಷ್ಟು ಪ್ರತಿಭೆ ಮತ್ತು ತಂತ್ರಜ್ಞಾನವುಳ್ಳ ಮಾನವ ಸಂಪನ್ಮೂಲ ಇಲ್ಲ. ಇದು ನಮ್ಮ ಹಿರಿಯರ ಕೊಡುಗೆ. 50 ವರ್ಷಗಳ ಹಿಂದೆ ಸುಧಾ ಮೂರ್ತಿಯವರು ಹುಬ್ಬಳ್ಳಿಯ ಇಂಜಿನಿಯರಿಂಗ್ ಕಾಲೇಜಿನಿಂದ ಪ್ರಥಮ ಮಹಿಳಾ ಇಂಜಿನಿಯರ್ ಆದವರು. ಇಬ್ಬರು ಮಹಾನ್ ಮಹಿಳೆಯರು ನಮ್ಮ ಮಧ್ಯೆ ಇದ್ದಾರೆ. ಇವರು ನಮ್ಮ ಶಕ್ತಿ, ಸಂಸ್ಕತಿ. ಮಹಿಳೆಯರು ಕೇವಲ ಮನೆಗೆ ಸೀಮಿತರಾದವರಲ್ಲ. ಒಬ್ಬರು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೆ, ಮತ್ತೊಬ್ಬರು ಇಡೀ ದೇಶವನ್ನು ಆಳುತ್ತಿದ್ದಾರೆ. ಅವರ ಆಶೀರ್ವಾದ ನಿಮಗೆ ಸಿಗುತ್ತಿದೆ ಎಂದರು.

RELATED ARTICLES

Related Articles

TRENDING ARTICLES