ಪ್ರತಿ ನಿತ್ಯ ಟೀ ಕುಡಿದೇ ಕುಡಿಯುತ್ತೇವೆ. ರೀಫ್ರೆಶ್ ಮೆಂಟ್ ಗೆ ಟೀ ಬೇಕೇ ಬೇಕು. ಟೀ ಕುಡಿದ್ರೆ ಒಂದು ರೀತಿಯ ಸ್ಟ್ರೆಸ್ ಕಡಿಮೆ ಯಾಗತ್ತೆ. ಅದರಲ್ಲೂ ಮಸಾಲ ಟೀ ,ಲೆಮನ್ ಟೀ, ಬ್ಲಾಕ್ ಟೀ ಹೀಗೆ ಹಲವಾರು ಬಗೆಯ ಚಹಾ ಟೇಸ್ಟ್ ಮಾಡಿರ್ತೀವಿ.
ಆದ್ರೆ, ಎಲ್ಲಾದರೂ ‘ತಂದೂರಿ ಚಾಹಿ’ ಕುಡಿದಿದ್ದೀರಾ? ಈ ಸ್ಪೆಷಲ್ ಟೀಗಾಗಿ ನೀವು ಬೆಂಗಳೂರಿನ ರಾಜಾಜಿನಗರಕ್ಕೆ ಹೋಗ್ಬೇಕು. ಇಲ್ಲಿ ನೀವೆಲ್ಲೂ ಸವಿಯದ ವೆರಿ ವೆರಿ ಸ್ಪೆಷಲ್ ತಂದೂರಿ ಚಾಹಿ ಸಿಗುತ್ತೆ.
ಹೌದು, ರಾಜಾಜಿನಗರದಲ್ಲಿ ತಂದೂರಿ ಚಾಯ್ ಪಾಯಿಂಟ್ ಅಂತ ಒಂದು ಟೀ ಸ್ಟಾಲ್ ಇದೆ. ಇಲ್ಲಿನ ವಿಶೇಷತೆಯೇ ತಂದೂರಿ ಚಾಹಿ. ಇದರ ವಿಶೇಷತೆ ಏನಪ್ಪಾ ಅಂದ್ರೆ ಮಸಾಲಾ ಟೀ ಮಾಡಿ ಅದನ್ನು ಮಡಿಕೆಯಲ್ಲಿ ಇಟ್ಟು ಕೆಲವು ಗಂಟೆಗಳ ನಂತರ ಮತ್ತೆ ಇದನ್ನು ಮಡಿಕೆಯಲ್ಲಿ ಬಿಸಿ ಮಾಡಿ ಗ್ರಾಹಕರಿಗೆ ಕೊಡ್ತಾರೆ. ಎರಡನೇ ಬಾರಿ ಬಿಸಿ ಮಾಡುವುದರಿಂದ ಮಸಾಲೆ ಫ್ಲೇವರ್ ಹಾಗೂ ಮಡಿಕಿ ಫ್ಲೇವರ್ ಮಿಕ್ಸ್ ಆಗಿ ಮತ್ತೊಂದು ಡಿಫ್ರೆಂಟ್ ರುಚಿಗೆ ಸಿಗತ್ತೆ. ಇನ್ನೂ ಸ್ಪೆಷಲ್ ಏನಂದ್ರೆ, ಗ್ರಾಹಕರಿಗೆ ಮಾಮೂಲಿ ಲೋಟದಲ್ಲಿ ಈ ಟೀ ಕೊಡಲ್ಲ.. ಬದಲಾಗಿ ಮಣ್ಣಿನ ಲೋಟದಲ್ಲಿ ಕೊಡ್ತಾರೆ.
ಇನ್ನು, ಈ ತಂದೂರಿ ಟೀ ರುಚಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಒಳ್ಳೆಯದು .ಹಿಂದಿನ ಕಾಲದಲ್ಲಿ ಮಣ್ಣಿನ ಮಡಿಕೆ ಉಪಯೊಗಿಸಿ ಅಡುಗೆ ಮಾಡುತ್ತಿದ್ದರು. ಅದೇ ಕಾನ್ಸೆಪ್ಟ್ ಇಟ್ಟುಕೊಂಡು ಈ ಟೀ ತಯಾರಿಸಲಾಗುತ್ತಿದೆ.ಇದು ಸಕ್ಕರೆ ಕಾಯಿಲೆ ಇರುವ ಜನರಿಗೆ,ತುಂಬಾ ಒಳಿತಂತೆ.
ಈ ತಂದೂರಿ ಟೀ ಮಹಾರಾಷ್ಟ್ರದ ಪುಣೆಯಲ್ಲಿ ಸಿಕ್ಕಾಪಟ್ಟೆ ಫೇಮಸ್. ಇಲ್ಲಿ ಹೆಚ್ಚಾಗಿ ಈ ಟೀ ಮಾಡ್ತಾರೆ. ಅದೇ ಕಾನ್ಸೆಪ್ಟ್ ನಲ್ಲಿ ತಂದೂರಿ ಟೀ ಪಾಯಿಂಟ್ನವರು ಬೆಂಗಳೂರಿಗೆ ಈ ಸ್ಪೆಷಲ್ ಟೀಯನ್ನು ಇಂಟ್ರಡ್ಯೂಸ್ ಮಾಡಿದ್ದಾರೆ. ನೀವೊಮ್ಮೆ ಫ್ರೀ ಮಾಡ್ಕೊಂಡು ಅಲ್ಲಿಗೆ ಹೋಗಿ ಟೀ ಕುಡಿದ್ರೆ ಮತ್ತೆ ಮತ್ತೆ ಹೋಗ್ತಾನೇ ಇರ್ತೀರಿ.
-ಚರಿತ ಪಟೇಲ್
ನೀವು ಗರಂ ಗರಂ ‘ತಂದೂರಿ ಚಹಾ’ ರುಚಿ ಕಂಡಿದ್ದೀರಾ..?
TRENDING ARTICLES