ಬೆಂಗಳೂರು : ಸಿಲಿಕಾನ್ ಸಿಟಿಯ ರಸ್ತೆ ಗುಂಡಿಗಳು ಇದೀಗ ಗೂಗಲ್ ಮ್ಯಾಪ್ನಲ್ಲಿ ಸ್ಥಾನ ಪಡೆದುಕೊಂಡಿವೆ. ಇದೇ ಮೊದಲ ಬಾರಿಗೆ ಗೂಗಲ್ ಮ್ಯಾಪ್ನಲ್ಲಿ ಬೆಂಗಳೂರು ಪಾತ್ಹೋಲ್ ಅಡ್ರೆಸ್ ಸಖತ್ ವೈರಲ್ ಆಗ್ತಿದೆ. ಬೆಳ್ಳಂದೂರಿನ Abizer’s pothole ಅಡ್ರೆಸ್ ಗೂಗಲ್ ಮ್ಯಾಪ್ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ BBMP ಮರ್ಯಾದೆ ಮೂರು ಕಾಸಿಗೆ ಹರಾಜು ಆಗಿದೆ. nimo tai ಅನ್ನೋ ಟ್ವಿಟ್ಟರ್ ಅಕೌಂಟ್ನಿಂದ ರಸ್ತೆಗುಂಡಿಯ ಸ್ಕ್ರೀನ್ಶಾಟ್ ಸಖತ್ ಸುದ್ದಿ ಆಗಿದ್ದು, ಇದು ನಾನು ಕಂಡ ಅದ್ಭುತ ರಸ್ತೆಗುಂಡಿ, ದಯವಿಟ್ಟು ಇಲ್ಲಿಗೆ ಭೇಟಿ ಕೊಡಿ ಎಂದು ಕಮೆಂಟ್ಗಳು ಟ್ರೆಂಡ್ ಆಗಿವೆ.
ಇನ್ನೂ ಇದೇ ವಿಚಾರಕ್ಕೆ ಮಾತನಾಡಿದ ಟ್ರಾಫಿಕ್ ಎಕ್ಸ್ಪರ್ಟ್ ಶ್ರೀಹರಿ, ಅಧಿಕಾರಿಗಳ ತಪ್ಪಿನಿಂದ ಗುಂಡಿಗಳೂ ಮ್ಯಾಪ್ನಲ್ಲಿ ಬರುವಂತಹ ಸ್ಥಿತಿಯನ್ನು ಅಧಿಕಾರಿಗಳು ಮಾಡಿದ್ದಾರೆ. ಈ ರಸ್ತೆ ಗಂಡಿಗಳಿಗೆ ಇನ್ಮುಂದೆ ಪಿನ್ಕೋಡ್ ಕೊಡುವುದು ಒಳ್ಳೆಯದು. ಅಧಿಕಾರಗಳು ಹೋಪ್ಲೆಸ್ ಕೆಲಸ ಮಾಡ್ತಿದ್ದಾರೆ. ಒಂದು ಅಡ್ರೆಸ್‌ಗೆ ಬೇಕಂದ್ರೆ ನಾವು ಮ್ಯಾಪ್ ಹಾಕಿಕೊಂಡು ಹೋಗುತ್ತೇವೆ. ಇದೀಗ ಗುಂಡಿಗಳಿಗೂ ಮ್ಯಾಪ್ ಬಂದಿದೆಯಲ್ಲ. ಐಟಿ ಸಿಟಿ ಬೆಂಗಳೂರಿನ ಮಾನ, ಮರ್ಯಾದೆ ತೆಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಗೂಗಲ್ ಮ್ಯಾಪ್ ಸಿಟಿಯ ರಸ್ತೆ ಗುಂಡಿಗಳು ಸದ್ಯ ಎಲ್ಲಾ ಕಡೆ ಸಖತ್ ಟ್ರೆಂಡ್ ಆಗ್ತಿವೆ.ಆದ್ರೆ, ಅಧಿಕಾರಿಗಳು ಮಾತ್ರ ಬೆಂಗಳೂರಿನ ಮಾನ ಮರ್ಯಾದೆ ಹೋಗ್ತಿದ್ದರೂ ನಮಗೂ ಇದಕ್ಕೂ ಸಂಬಂಧವಿಲ್ಲ ಅಂತಾ ಗಾಢನಿದ್ದೆಯಲ್ಲಿದ್ದಾರೆ.
ಸ್ವಾತಿ ಪುಲಗಂಟಿ, ಮೆಟ್ರೋ ಬ್ಯೂರೋ, ಬೆಂಗಳೂರು