ಬೆಂಗಳೂರು : ರಾಜ್ಯ ಕಾಂಗ್ರೆಸ್ ನಾಯಕರು ಆರಂಭಿಸಿದ ‘ಪೇಸಿಎಂ’ ಅಭಿಯಾನ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ಗೆ ಹೆಚ್ಚು ಹೆಚ್ಚು ಪ್ರಚಾರ ತಂದುಕೊಡುತ್ತಿದ್ರೆ. ಆಡಳಿತ ಪಕ್ಷ ಬಿಜೆಪಿ ಮತ್ತು ಸಿಎಂ ಬೊಮ್ಮಾಯಿಗೆ ಸಾಕಷ್ಟು ಹಿನ್ನಡೆಯಾಗುತ್ತಿದೆ. ಒಂದೆರಡು ಕಡೆ ಆರಂಭವಾದ ಅಭಿಯಾನ, ಇದೀಗ ಜಿಲ್ಲಾ ಕೇಂದ್ರಗಳಿಗೂ ಹಬ್ಬಿದೆ. ಇದು ಆಡಳಿತ ಪಕ್ಷಕ್ಕೆ ಭಾರಿ ಮುಜುಗರ ಉಂಟುಮಾಡುತ್ತಿದೆ.
ಕಾಂಗ್ರೆಸ್-ಬಿಜೆಪಿ ಮಧ್ಯೆ ‘ಪೇಸಿಎಂ’ ಜಟಾಪಟಿ ಜೋರಾಗುತ್ತಿದೆ. ಇದ್ರಿಂದ ಸಿಎಂಗೆ ಟೆನ್ಷನ್ ಹೆಚ್ಚಾಗಿದ್ದು ಅಭಿಯಾನ ಮಾಡೋರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ರೆ. ಪೇಸಿಎಂ ಅಭಿಯಾನವನ್ನು ಮತ್ತಷ್ಟು ಜೋರು ಮಾಡುವಂತೆ ಸಿದ್ದರಾಮಮ್ಯ, ಡಿಕೆ ಶಿವಕುಮಾರ್ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಈ ನಡುವೆ ಕಾಂಗ್ರೆಸ್‌ನ ‘ಪೇ ಸಿಎಂ’ ಕ್ಯಾಂಪೇನ್‌ಗೆ ತಿರುಗೇಟು ನೀಡಿರೋ ಬಿಜೆಪಿ, ‘ಕಳ್ಳ ಡಿಕೆ, ಮಳ್ಳ ಪಿಂಕಿ, ಸುಳ್ಳ ಸಿದ್ದು’ KPCC ಅಂದ್ರೆ ಕರ್ನಾಟಕ ಪೊಲಿಟಿಕಲ್ ಕರಪ್ಷನ್ ಕಂಪನಿ ಎಂದು ಪೋಸ್ಟರ್ ವೈರಲ್ ಮಾಡಿದ್ರೆ.
ಸಚಿವ ಆರ್.ಅಶೋಕ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಪೋಸ್ಟರ್ ಅಂಟಿಸಿದ್ದು, ಕೆರೆಗಳನ್ನ ನುಂಗಿದ ಸಾಮ್ರಾಟ್ ಅಶೋಕ. ಕಾಣೆಯಾಗಿರುವ ಕೆರೆಗಳನ್ನ ಹುಡುಕಿಕೊಡಿ ಎಂದು ಪೋಸ್ಟರ್ ವೈರಲ್ ಮಾಡಿದ್ದಾರೆ.
ಪೇ ಸಿಎಂ’ ಪೋಸ್ಟರ್ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಸರ್ಕಾರ, ವಿಶಿಷ್ಠ ಅಭಿಯಾನ ಆರಂಭಿಸಿದೆ.
ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂಬ ವಿಶಿಷ್ಠ ಶೀರ್ಷಿಕೆಯಡಿ ಅಭಿಯಾನ ಆರಂಭಿಸಿದೆ. ಶೀರ್ಷಿಕೆಯ ನಾಮಫಲಕವನ್ನ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಆದೇಶ ನೀಡಿದ್ದಾರೆ.
ರೂಪೇಶ್ ಬೈಂದೂರು, ಪವರ್ ಟಿವಿ, ಬೆಂಗಳೂರು