ಕೇರಳ: ದೇಶದ 11 ರಾಜ್ಯಗಳಲ್ಲಿ ನಿನ್ನೆ ಪಿಎಫ್ಐ ಹಾಗೂ ಎಸ್ಡಿಪಿಐ ಮುಖಂಡರ ಮನೆ ಮೇಲೆ ಹಾಗೂ ಕಚೇರಿಗಳ ಮೇಲೆ ಎನ್ಐಎ(ರಾಷ್ಟ್ರೀಯ ತನಿಖಾ ದಳ) ದಾಳಿ ನಡೆಸಿ ಸುಮಾರು 100 ಕ್ಕೂ ಹೆಚ್ಚು ಕಾರ್ಯಕರ್ತರನ್ನ ಬಂಧಿಸಿರುವುದನ್ನ ಖಂಡಿಸಿ ಇಂದು ದೇಶ ಹಲವು ರಾಜ್ಯಗಳಲ್ಲಿ ಪಿಎಫ್ಐ ಮುಖಂಡರು ಹಿಂಸಾಚಾರ ನಡೆಸಿದ್ದಾರೆ.
ಕೇರಳ, ಪುದುಚೇರಿ, ತಮಿಳುನಾಡಿನಲ್ಲಿ ಪಿಎಫ್ಐ ಹಾಗೂ ಎಸ್ಡಿಪಿಐ ಮೇಲಿನ ದಾಳಿ ಖಂಡಿಸಿ ಹಿಂಸಾಚಾರ ಕಿಡಿಗೇಡಿಗಳಿಂದ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೊಯಮತ್ತೂರಿನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪಿಎಫ್ಐ ಕಾರ್ಯಕರ್ತರು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ಅದರಂತೆ ಕೇರಳದ ತಿರುವನಂತಪುರಂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಇಂದು ಕೇರಳ ಬಂದ್ಗೆ ಕರೆ ನೀಡಿದೆ. ಬಂದ್ಗೆ ಕರೆ ನೀಡಿದ ಹಿನ್ನಲೆಯಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾ ಮತ್ತು ಕಾರನ್ನ ಪಿಎಫ್ಐ ಸಂಘಟನೆ ಮುಖಂಡರು ಕಲ್ಲು ತೂರಾಟ ನಡೆಸಿ ಜಖಂ ಮಾಡಿದ್ದಾರೆ ಎಂದು ವರದಿ ತಿಳಿಸಿವೆ.