ಗದಗ; ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದೊಯ್ದು ಅಮಾಯಕರ ಯುವಕರ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಆರೋಪ ಗದಗ ಗ್ರಾಮೀಣ ಪೊಲೀಸರ ಮೇಲೆ ಕೇಳಿಬಂದಿದೆ.
ಬಾಗಲಕೋಟೆ ಮೂಲಕ ಮಹಿಳೆಯೊಬ್ರು ಚೀಟಿಂಗ್ ಕೇಸ್ ಸಂಬಂದಿಸಿದಂತೆ ಮೌಖಿಕ ದೂರು ಕೊಟ್ಟ ಹಿನ್ನೆಲೆಯಲ್ಲಿ ಚೀಟಿಂಗ್ ಕೇಸ್ ಗೆ ಸಂಬಂಧಿಸಿದಂತೆ ತಿಮ್ಮಾಪುರ ಗ್ರಾಮದ ಕಳಕಪ್ಪ ಹಡಪದ, ಮಂಜುನಾಥ್ ಗುಡಿಗೇರಿ, ನಾಗರಾಜ್ ಬೂದಗುಂಪ ಅನ್ನೋರಿಗೆ ಬಾಸುಂಡೆ ಬರೋಹಾಗೆ ಥಳಿಸಿದ್ದಾರೆ.
ಈ ಕೇಸ್ಗೆ ಸಂಬಂಧಿಸಿದಂತೆ ಬುಧವಾರ ಮಧ್ಯಾಹ್ನ ಯುವಕರನ್ನ ಪೊಲೀಸರು ವಶಕ್ಕೆ ಪಡೆದು, ಅಂದು ರಾತ್ರಿವರೆಗೂ ಡ್ರೀಲ್ ಮಾಡಿದ್ದಾರೆ. ಯುವಕರು ನಿರಪರಾಧಿಗಳು ಎಂದು ಗೊತ್ತಾದ ತಕ್ಷಣ ಯಾರಿಗೂ ಹೇಳ್ಬೇಡಿ ಎಂದು ಗದಗ ಗ್ರಾಮೀಣ ಪೊಲೀಸರು ಬಿಟ್ಟು ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಯುವಕರಿಂದಲೇ ಹಣ ಪಡೆದು, ಮದ್ಯ ಸೇವಿಸಿ ಥಳಿಸಿದ್ದಾರೆ. ಹಗ್ಗಕ್ಕೆ ನೇತು ಹಾಕಿ, ಎದೆ ಬೆನ್ನು, ಬೆನ್ನಿನ ಕೆಳಭಾಗಕ್ಕೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಗದಗ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಸೇರಿ ನಾಲ್ವರು ಸಿಬ್ಬಂದಿಗಳ ಮೇಲೆ ಯುವಕರು ಹೇಳಿದ್ದಾರೆ.
ಇನ್ನು ಕೇಸ್ ಸಂಬಂಧಿಸಿದಂತೆ ಯಾವುದೇ ಎಫ್ಐಆರ್ ದಾಖಲಿಸದೇ ಪೊಲೀಸ್ ಸಿಬ್ಬಂದಿಗಳ ಕ್ರೌರ್ಯಕ್ಕೆ ಗದಗ ಎಸ್ಪಿ ಕಚೇರಿ ಎದುರು ನ್ಯಾಯ ಕೊಡಿಸುವಂತೆ ಗ್ರಾಮಸ್ಥರು ಆಗ್ರಹ ಮಾಡುತ್ತಿದ್ದಾರೆ.