ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಯಾರು ಮುಂದಿದ್ದಾರೆ ಅಂತ ಹೇಳಬೇಕಾಗಿಲ್ಲ. ಅವರು ಟೀಕೆ ಮಾಡಿದ್ರೆ ಸರಿ, ವಿರೋಧ ಪಕ್ಷದವರು ಟೀಕೆ ಮಾಡಬಾರದು ಎಂದು ಬಿಕೆ ಹರಿಪ್ರಸಾದ್ ಹೇಳಿದರು.
ಇನ್ನು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಗುರು, ಬಿಜೆಪಿಯವರನ್ನು ಟೀಕಿಸಿದ್ರೆ ಪೊಲೀಸರು ಹೋಗಿ ಬೆದರಿಸ್ತಾ ಇದಾರೆ. ಪೊಲೀಸರಿಗೆ ಬೇರೆ ಕೆಲಸ ಇಲ್ವಾ. ತಪ್ಪಿತಸ್ಥರಿಗೆ ಶಿಕ್ಷೆ ಕೊಡೋದು ಬಿಟ್ಟು ಇದ್ಯಾಕೆ ಮಾಡುತ್ತಾರೆ. ಬಿ.ಆರ್ ನಾಯ್ಡು, ಯಾದವ್ ಕೆ.ಆರ್ ಪುರಂನಲ್ಲಿದ್ದವರ ಮನೆಗೆ ರಾತ್ರಿ 2 ಗಂಟೆಗೆ ಬಾಗಿಲು ತೆಗೆಯಲು ಹೇಳಿ ಭಯಬೀಳಿಸಿದ್ದಾರೆ. ಪೋಸ್ಟರ್ ಹಾಕಿಸಿದ್ದನ್ನು ರಾತ್ರಿಯೇ ಕೀಳಲು ಹೋಗಿದ್ದಾರೆ ಎಂದರು.
ಸೋಷಿಯಲ್ ಮೀಡಿಯಾದಲ್ಲಿ ನಮ್ಮ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರ ಮೇಲೆ ಎಷ್ಟೆಲ್ಲ ಮಾತಾಡಿಲ್ಲ. ಕಾನೂನಿನ ಚೌಕಟ್ಟಲ್ಲಿ ಕ್ರಮ ತೆಗೆದುಕೊಳ್ಳಿ. ಡೆತ್ ನೋಟ್ ಬರೆದಿಟ್ಟು ಸತ್ತಿದ್ದಾರೆ. ಆಗ ಶಿವಮೊಗ್ಗದ ಮಾಜಿ ಸದಸ್ಯರನ್ನು ಬಂಧಿಸಿದ್ರಾ? 40% ವಿಚಾರ ಹೊಸ ವಿಚಾರ ಅಲ್ಲ. ಈಗಾಗಲೇ ಪತ್ರಿಕೆಯಲ್ಲೂ ಬಂದಿವೆ ಎಂದು ಹೇಳಿದರು.
ಅದಲ್ಲದೇ, ನಿಮ್ಮಲ್ಲಿ ತಾಕತ್ತು ಧಂ ಇದ್ರೆ ತನಿಖೆ ಮಾಡಿ. ಮೂರು ಯಾಕೆ ಹತ್ತು ತಲೆಮಾರಿದ್ದೂ ಮಾಡಿ.ಬಿಟಿ ಲಲಿತಾ ನಾಯ್ಕ್ ಗೆ 9 ಬೆದರಿಕೆ ಪತ್ರ ಬಂದಿದ್ರೂ ಬಂಧಿಸಿಲ್ಲ. ಆ ಪತ್ರದಲ್ಲಿ ಸಿದ್ಧರಾಮಯ್ಯ, ಕುಮಾರಸ್ವಾಮಿ, ಹರಿಪ್ರಸಾದ್ ಅವರ ಹೆಸರೂ ಇದೆ. ಒಂದು ಹೆಣ್ಣು ಹೆಂಗಸಿಗೆ ರಕ್ಷಣೆ ಕೊಡಲಾಗದವರೂ ಇನ್ನೂ ರಕ್ಷಣಾ ಸಚಿವರಾಗಿ ಇದ್ದಾರೆ. ಸೋಷಿಯಲ್ ಸುಳ್ಳು ಹಬ್ಬಿಸೋ ಫ್ಯಾಕ್ಟರಿ ಇರೋದೆ ನಿಮ್ಮಲ್ಲಿ. ಕಡ್ಲೆಕಾಯಿ ಫ್ಯಾಕ್ಟರಿ ಅನ್ನುವ ಬಗ್ಗೆ ದೂರು ಕೊಟ್ರೆ ಅರೆಸ್ಟ್ ಮಾಡಿಲ್ಲ. ಇನ್ನೂ ಜೋರು ಮಾಡಿ ಅಂತ ಹೇಳಿ ಕಳಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂದರು.