ಮುಂಬೈ: ಮುಂಬಯಿನ ನವ ಶೇವಾ ಬಂದರಿನಲ್ಲಿ ಸುಮಾರು1,725 ಕೋಟಿ ಮೌಲ್ಯದ ಮಾದಕ ವಸ್ತುವನ್ನ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ದೆಹಲಿ ಪೊಲೀಸರಿಂದ ಮುಂಬೈಯಲ್ಲಿ ಕಾರ್ಯಾಚರಣೆ ನಡೆಸಿ ಕಂಟೈನರ್ನಲ್ಲಿ ಅಡಗಿಸಿಟ್ಟಿದ್ದ ಡ್ರಗ್ಸ್ ಸಾಗಾಟವನ್ನ ಪತ್ತೆ ಹಚ್ಚಿ 20 ಟನ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಈ ಬಗ್ಗೆ ದೆಹಲಿಯ ವಿಶೇಷ ಪೊಲೀಸ್ ತಂಡ ತೀವ್ರ ತನಿಖೆ ನಡೆಸುತ್ತಿದೆ.
ಸದ್ಯ ಈ ಕಂಟೇನರ್ನ್ನ ವಶಪಡಿಸಿಕೊಂಡು ದೆಹಲಿಗೆ ಸಾಗಿಸಲಾಯಿತು. ವಶಪಡಿಸಿಕೊಂಡ ಹೆರಾಯಿನ್ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1,725 ಕೋಟಿ ರೂ ಎಂದು ದೆಹಲಿ ಪೊಲೀಸರ ವಿಶೇಷ ತಂಡ ಹೇಳಿದೆ.