ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಸಮಾರಂಭದ ಆಯೋಜಕ ಹಾಗೂ ಹೋಟೆಲ್ ಮ್ಯಾನೇಜರ್ ಮೇಲೆ ಎಎಫ್ಐಆರ್ ದಾಖಲಾಗಿದೆ.
ಸೆ.10 ರಿಂದ 12 ರವರೆಗೆ ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸೈಮಾ ಅವಾರ್ಡ್ ಪ್ರಶಸ್ತಿ ಸಮಾರಂಭ ವಿಠ್ಠಲ್ ಮಲ್ಯ ರಸ್ತೆಯ ಎಡಬ್ಲೂ ಮ್ಯಾರಿಯೆಟ್ ಹೋಟೆಲ್ ನಲ್ಲಿ ನಡೆದಿತ್ತು. ಈ ವೇಳೆ ಕಾನೂನು ಪಾಲನೆಯ ಮಾಡದೇ ಇರೋದಕ್ಕೆ ಕೇಸ್ ದಾಖಲಾಗಿದೆ.
ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ತೆಲಗು, ಕನ್ನಡ ಹಾಗೂ ಬಾಲಿವುಡ್ನ ದೊಡ್ಡ ದೊಡ್ಡ ನಟ, ನಟಿಯರು ಭಾಗಿಯಾಗಿದ್ದರು. ಮಧ್ಯರಾತ್ರಿ 1 ಗಂಟೆಗೆ ಮುಗಿಯಬೇಕಿದ್ದ ಪಾರ್ಟಿ ಕಾರ್ಯಕ್ರಮವನ್ನ ಬೆಳಿಗ್ಗೆ 3:30 ರ ವರೆಗೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದು ಈಗ ಎಎಫ್ಐಆರ್ ದಾಖಲಾಗಿದೆ.
ಸೆ. 12 ರಂದು ಕಾನೂನು ಪಾಲನೆಯ ಬಗ್ಗೆ ಪರಿಶೀಲನೆಗಾಗಿ ನೋಡಲು ಪೊಲೀಸರು ಬಂದಿದ್ದರು. ನಂತರ 1 ಗಂಟೆಗೆ ಪಾರ್ಟಿ ಮುಕ್ತಾಯ ಮಾಡುವಂತೆ ಆಯೋಜಕರಿಗೆ ಪೊಲೀಸರು ತಿಳಿಸಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದೆ ಸೈಮಾ ಕಾರ್ಯಕ್ರಮವನ್ನ ಬೆಳಿಗ್ಗೆ 3;30 ವರೆಗೆ ನಡೆಸಿದ್ದರು.
ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ಚೈತನ್ಯ ಕೊಟ್ಟಿರುವ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ಸ್ಪೆಕ್ಟರ್ ದೂರಿನನ್ವಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಎಫ್ಐಆರ್ ದಾಖಲಿಸಿ ಕಾರ್ಯಕ್ರಮ ಆಯೋಜಕರು ಹಾಗೂ ಹೋಟೆಲ್ ಮ್ಯಾನೇಜರ್ ಗೆ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.