ಹಾಸನ : ನಾನು ಕೇವಲ ಮಕ್ಕಳಿಗಾಗಿ ಅಲ್ಲಾ, ದೇವೇಗೌಡರ ಜೊತೆ ರಾಜಕೀಯವಾಗಿ ನಿಂತ ಜನರಿದ್ದಾರೆ. ಹಾಗಾಗಿ ಜನರು ಕರೆದಾಗ ನಾನು ಬರುತ್ತೇನೆ ಎಂದು ಹಾಸನದಲ್ಲಿ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರದ ಜನರು ಮನೆ ಮಗಳಂತೆ ಕಾರ್ಯಕ್ರಮಕ್ಕೆ ಕರೆಯುತ್ತಾರೆ. ನಾನು ಕೇವಲ ಮಕ್ಕಳಿಗಾಗಿ ಅಲ್ಲಾ, ದೇವೇಗೌಡರ ಜೊತೆ ರಾಜಕೀಯವಾಗಿ ನಿಂತ ಜನರಿದ್ದಾರೆ. ಹಾಗಾಗಿ ಜನರು ಕರೆದಾಗ ನಾನು ಬರುತ್ತೇನೆ. ಅಭ್ಯರ್ಥಿ ಹೆಸರು, ಚರ್ಚೆ, ಅದು ಇದು ಏನೂ ನನಗೆ ಗೊತ್ತಿಲ್ಲ ಎಂದರು.
ಇನ್ನು, ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಏನು ಗೊತ್ತಿಲ್ಲ, ನಾನು ಡೈರಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ದೆಹಲಿಗೆ ಹೋಗಿದ್ದೆ, ಅವರು ಏನು ಮಾತನಾಡಿದ್ದರು ಎಂದು ನಾನು ಗಮನಿಸಿಲ್ಲ, ನಾನು ನೆನ್ನೆ ವಾಪಸ್ ಬಂದಿದ್ದೇನೆ. ಚುನಾವಣೆಗೆ ನಿಲ್ಲುವಂತೆ ಬೆಂಬಲಿಗರು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ದಿನಾ ಬೆಳಿಗ್ಗೆ ಫೋನ್ ಮಾಡಿ, ಮನೆ ಬಳಿ ಬಂದು, ಹಾಸನಕ್ಕೆ ಭೇಟಿ ನೀಡಿದಾಗ ಒತ್ತಡ ಹಾಕುತ್ತಿದ್ದಾರೆ. ಆದರೆ ನಾನು ಈ ಬಗ್ಗೆ ನಾನಾಗೆ ಏನು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹಾಸನ ಕ್ಷೇತ್ರದ ಸ್ಪರ್ಧೆ ಬಗ್ಗೆ ಭವಾನಿ ರೇವಣ್ಣ ಇಂಗಿತ ವ್ಯಕ್ತಪಡಿಸಿದ್ದಾರೆ.
ಅದಲ್ಲದೇ, ಮನೆಯಲ್ಲಿ ಹಿರಿಯರಿದ್ದಾರೆ, ದೇವೇಗೌಡರು, ಕುಮಾರಣ್ಣ, ರೇವಣ್ಣನವರು ಇದ್ದಾರೆ ಶಾಸಕರು ಮುಖಂಡರಿದ್ದಾರೆ. ಹಾಸನದ ಮಹಿಳಾ ನಾಯಕಿಯರು ನನ್ನ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದಾರೆ. ಹಾಗಾಗಿ ಎಲ್ಲರ ತೀರ್ಮಾನಕ್ಕೆ ಅದಕ್ಕೆ ನಾನು ಬದ್ದನಾಗಿರುತ್ತೇನೆ. ನನ್ನನ್ನ ಯಾರೇ ಕೇಳಿದರು ಮನೆಯವರು ಹಾಗು ಪಕ್ಷ ತೀರ್ಮಾನ ಮಾಡಿದ್ದಕ್ಕೆ ಎಲ್ಲರೂ ಬದ್ದವಾಗಿರೋಣ ಎಂದು ಹೇಳಿದ್ದೇನೆ. ನಾನು ಎಂದು ನಾನೇ ಕ್ಯಾಂಡೇಟ್ ಎಂದು ಹೇಳಿಲ್ಲ ಎಂದರು.
ಹಾಸನದಲ್ಲಿ ಸೆಪ್ಟೆಂಬರ್ 13 ರಂದು ಮಾಜಿ ಶಾಸಕ ದಿವಂಗತ ಪ್ರಕಾಶ್ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ನಡೆದ ಜೆಡಿಎಸ್ ಸಮಾವೇಶ ವಿಚಾರಕ್ಕೆ ಸಂಭಂದಿಸಿದಂತೆ ಮಾತನಾಡಿದ ಅವರು, ರೇವಣ್ಣ ಅವರು ಹಾಗೆ ಹೇಳಿದ ಬಗ್ಗೆ ಕೂಡ ನನಗೆ ಗೊತ್ತಿಲ್ಲ. ಅವರು ದೆಹಲಿಯಿಂದ ಮೊದಲೆ ಬಂದರು ನಾನು ಬಳಿಕ ಬಂದೆ. ಅವರ ಅಣ್ಣ ತಮ್ಮನ ವಿಚಾರ ಏನೆಂದು ನನಗೆ ಗೊತ್ತಿಲ್ಲ. ಹುಟ್ಟು ಹಬ್ಬದ ಕಾರ್ಯಕ್ರಮ ಬಗ್ಗೆ ನನಗೆ ನಿಜವಾಗಿಯು ಗೊತ್ತಿಲ್ಲ. ನನಗೆ ಯಾರೂ ಕೂಡ ಫೋನ್ ಮಾಡಿಲ್ಲ ಇದಂತೂ ನಿಜ. ನನಗೆ ಯಾರೊಬ್ಬರೂ ಕೂಡ ಫೊನ್ ಮಾಡಿಲ್ಲ, ಕಾರ್ಯಕ್ರಮ ಇರೋದು ಕೂಡ ಗೊತ್ತಿಲ್ಲ. ನಾನು ದೆಹಲಿಗೆ ನಾಲ್ಕು ದಿನ ಮೊದಲೆ ಹೋಗಿದ್ದೆ ಎಂದು ಭವಾನಿ ರೇವಣ್ಣ ಹೇಳಿದರು.