10 ದಿನಗಳ ಶೋಕಾಚರಣೆ ಬಳಿಕ ಇಂದು ರಾಣಿ ಎಲಿಜಬೆತ್ ಅಂತ್ಯಕ್ರಿಯೆ ನಡೆಯಲಿದೆ. ಕೆಲವೇ ಕ್ಷಣಗಳಲ್ಲಿ ರಾಣಿ ಎಲಿಜಬೆತ್ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಿ ಸಂಜೆ 7ಕ್ಕೆ ವೆಸ್ಟ್‌ಮಿನಿಸ್ಟರ್ ಅಬೆಗೆ ತಲುಪಲಿದೆ.
ನಂತರ ರಾತ್ರಿ 12 ಗಂಟೆಗೆ ಪತಿ ಫಿಲಿಪ್ ಪಕ್ಕದಲ್ಲೇ ಎಲಿಜಬೆತ್ ಸಮಾಧಿಯಾಗಲಿದ್ದಾರೆ. ಇದರಲ್ಲಿ ಪಾಲ್ಗೊಳ್ಳಲು ಜಗತ್ತಿನ ಅನೇಕ ರಾಷ್ಟ್ರಗಳ ಗಣ್ಯಾತಿಗಣ್ಯರು ಲಂಡನ್ ನಗರಕ್ಕೆ ಆಗಮಿಸುತ್ತಿದ್ದಾರೆ.ಸ್ಕಾಟ್ಲೆಂಡ್‌ನ ಬಾಲ್ಮೊರಲ್ ಕ್ಯಾಸ್ಟಲ್ ಅರಮನೆಯಲ್ಲಿ ಇದೇ ಸೆಪ್ಟೆಂಬರ್ 8ರಂದು ರಾಣಿ ಎಲಿಜಬೆತ್ ನಿಧನರಾಗಿದ್ದರು. 10 ದಿನಗಳ ಶೋಕಾಚರಣೆ ಬಳಿಕ ಇಂದು ಅವರ ಅಂತ್ಯಸಂಸ್ಕಾರವು ಲಂಡನ್ನ ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ನೆರವೇರಲಿದೆ.
ರಾತ್ರಿ 12 ಗಂಟೆಗೆ ಪತಿ ಫಿಲಿಪ್ ಪಕ್ಕದಲ್ಲೇ ಎಲಿಜಬೆತ್ ಸಮಾಧಿಯಾಗಲಿದ್ದಾರೆ. ಇದರಲ್ಲಿ ಪಾಲ್ಗೊಳ್ಳಲು ಜಗತ್ತಿನ ಅನೇಕ ರಾಷ್ಟ್ರಗಳ ಗಣ್ಯಾತಿಗಣ್ಯರು ಲಂಡನ್ ನಗರಕ್ಕೆ ಆಗಮಿಸುತ್ತಿದ್ದು, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು , ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಹಲವರು ಈಗಾಗಲೇ ರಾಣಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.