ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರವಾಗಿ ಇಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಟಿ ನಡೆಸಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮಾಜದ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡೊ ವಿಚಾರದಲ್ಲಿ ಸಿಹಿ ಸುದ್ದಿ ಕೊಡೋದಾಗಿ ಹೇಳಿದ್ದರು. ಆದ್ರೀಗ ಕೊಟ್ಟು ಮಾತು ಈಗ ತಪ್ಪಿದ್ದಾರೆ ಎಂದು ಸ್ವಾಮೀಜಿ ಕಿಡಿಕಾರಿದರು.
ಆದರೆ ಇವರೆಗೂ ಮೀಸಲಾತಿ ಘೋಷಣೆ ಮಾಡಲಿಲ್ಲ. ನಾವು ಸೆಪ್ಟೆಂಬರ್ 20 ರಂದು ಮುಖ್ಯಮಂತ್ರಿಗಳ ಶಿಗ್ಗಾವಿ ನಿವಾಸದ ಮುಂದೆ ಬೃಹತ್ ಹೋರಾಟ ಮಾಡಲಿದ್ದೇವೆ. ಅಂದಿನ ನಮ್ಮ ಹೋರಾಟ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಪಂಚಮಸಾಲಿ ಸಮಾಜದ ಎಲ್ಲಾ ಮುಖಂಡರು ಹೋರಾಟದಲ್ಲಿ ಭಾಗಿಯಾಗ್ತಾರೆ. ಸೋಮವಾರ ಸದನದ ಒಳಗೆ ನಮ್ಮ ಪಂಚಮಸಾಲಿ ಸಮಾಜದ ಶಾಸಕರು ಧನಿ ಎತ್ತಲಿದ್ದಾರೆ ಎಂದರು.
ಸೆ.20 ರ ಮಾರನೇ ದಿನ ಮಂಗಳವಾರ ನಾವು ಶಿಗ್ಗಾವಿಯಲ್ಲಿ ಎತ್ತಲಿದ್ದೇವೆ. ಸದನದ ಹೊರಗೂ ಹೋರಾಟ, ಸದನದ ಒಳಗೂ ಹೋರಾಟ ಮಾಡುತ್ತೇವೆ. ಸರ್ಕಾರ ಸ್ಪಂದಿಸದಿದ್ದರೆ ಅಕ್ಟೋಬರ್ ಕೊನೆ ವಾರ ಅಥವಾ ನವೆಂಬರ್ ಮೊದಲನೇ ವಾರ ಮತ್ತೆ ಬೃಹತ್ ಹೋರಾಟ ನಡೆಸಲು ತೀರ್ಮಾನ ಮಾಡಿದ್ದೇವೆ. ಬೆಂಗಳೂರಿನಲ್ಲಿ 25 ಲಕ್ಷ ಪಂಚಮಸಾಲಿಗಳನ್ನು ಸೇರಿಸಿ ಹೋರಾಟ ಮಾಡುತ್ತೇವೆ. ಪಂಚಮಸಾಲಿ ಸಮಾಜಕ್ಕೆ ಬೇಕು ಅಂತಾನೇ ಮೀಸಲಾತಿ ವಿಳಂಬ ಮಾಡಿಸ್ತಿದ್ದಾರೆ. ಅವರ ಹೆಸರನ್ನು ಕೂಡಾ ಸದ್ಯದರಲ್ಲೇ ಬಹಿರಂಗ ಮಾಡ್ತೀವಿ ಎಂದು ಶ್ರೀಗಳು ತಿಳಿಸಿದರು.
ಮೀಸಲಾತಿ ಕುರಿತು ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಅವರು ಮಾತನಾಡಿದ್ದು ತಪ್ಪು. ನಮ್ಮ ಸಮಾಜದ ಬಗ್ಗೆ ಮಾತಾಡಿದ್ದರೆ ಏನೋ ದೊಡ್ಡ ಸಾಹುಕಾರರಿದ್ದಾರೆ ಅಂತ ಸುಮ್ಮನಾಗುತ್ತಿದ್ದೆವು. ಆದರೆ ತಮಗೆ ಜನ್ಮ ನೀಡಿದ ಹಾಲುಮತ ಸಮಾಜಕ್ಕೆ ಮೀಸಲಾತಿ ಬೇಡ ಅಂತ ಹೇಳಿದರೆ ತಪ್ಪು, ಆತರ ಮಾತನಾಡಬಾರದು ಎಂದು ಎಚ್ಚರಿಸಿದರು.