ಬೆಂಗಳೂರು: ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟನೆ ಮಾಡಿದರು.
ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಪ್ಯಾಲೇಸ್ ಗುಟ್ಟಹಳ್ಳಿ ಇರುವ ಒಂದೇ ಕಡೆ ಎಲ್ಲ ಚಿಕಿತ್ಸೆಗಳೂ ಲಭ್ಯವಿರುವ ಆಸ್ಪತ್ರೆಯಾಗಿದೆ. ರೋಗಿಗಳ ಅನುಕೂಲಕ್ಕಾಗಿ ಮೊಬೈಲ್ ಆಪ್ ಹಾಗೂ ರಿಜಿಸ್ಟಾರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಡಾಕ್ಟರ್ಸ್, ಡಯಾಗ್ನೊಸ್ಟಿಕ್, ಡಿಜಿಟಲ್ ಎಕ್ಸ್ ರೇ, ಲ್ಯಾಬ್ ಸೇರಿದಂತೆ ಆಸ್ಪತ್ರೆಯಲ್ಲಿ ಎಲ್ಲವೂ ಡಿಜಿಟಲ್ ಹಾಗೂ ಆಟೋಮ್ಯಾಟಿಕ್ ವ್ಯವಸ್ಥೆ ಇದೆ. ಅಲ್ಲದೇ, ಕಣ್ಣಿನ ತಪಾಸಣೆ ಹಾಗೂ ದಂತಚಿಕಿತ್ಸೆ ಬೇಕಾದ ಸೌಲಭ್ಯವನ್ನ ಕಲ್ಪಿಸಲಾಗಿದೆ.
ಈ ಆಸ್ಪತ್ರೆಯಲ್ಲಿ ಒಟ್ಟು 30 ಬೆಡ್ ದ್ದು, ಆಕ್ಸಿಜನ್ ವ್ಯವಸ್ಥೆ, ನುರಿತ ವೈಧ್ಯರ ತಂಡಗಳ ನೇಮಕ ಮಾಡಲಾಗಿದೆ. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಮೂಲಕ ಬೇರೆ ಆಸ್ಪತ್ರೆಗೆ ರೆಫರ್ ಮಾಡುವ ಆಯ್ಕೆ ಮಾಡಲಾಗದೆ ಎಂದು ಸಿಎಂ ತಿಳಿಸಿದರು. ಸಿಎಂಗೆ ಸಚಿವ ಅಶ್ವತ್ಥ್ ನಾರಾಯಣ ಸಾಥ್ ನೀಡಿದರು.