Wednesday, October 30, 2024

ಸಿಲಿಕಾನ್​ ಸಿಟಿಯಲ್ಲಿ ಬುಸ್​​ ಬುಸ್​​​ ನಾಗಪ್ಪ ಎಂಟ್ರಿ..!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇದೀಗ ಬುಸ್ ಬುಸ್ ನಾಗಪ್ಪನ ಕಾಟ ಹೆಚ್ಚಾಗಿದೆ. ಸಿಟಿ ಜನರಲ್ಲಿ ಹಾವು ಭಯ ಉಂಟು ಮಾಡ್ತಿದ್ದಾನೆ.

ಮಳೆ ನಿಲ್ಲುತ್ತಿದಂತೆ ಪ್ರವಾಹ ಜಾಗದಲ್ಲಿ ಹಾವುಗಳು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಮಳೆ ಅಧಿಕವಾಗಿ ಬಂದ ಜಾಗದಲ್ಲಿ ಹಾವುಗಳು ಪ್ರತ್ಯಕ್ಷವಾಗ್ತಿವೆ. ಈ ಭಾರಿ ಅಧಿಕ ಮಳೆಯಾದ ಕಾರಣ ಕೆರೆಗಳೆಲ್ಲಾ ಕೋಡಿ ಒಡೆದಿವೆ. ಈ ಹಿನ್ನೆಲೆಯಲ್ಲಿ ಕೆರೆಯಿಂದ ಹಾವುಗಳು ಆಗಮಿಸ್ತಿದ್ದಾವೆ. ನೀರು ಕಡಿಮೆ ಆಗುತ್ತಿದ್ದದಂತೆ ಮನೆಗಳಲ್ಲಿ ಹಾವುಗಳು ಪ್ರತ್ಯಕ್ಷವಾಗಿದ್ದು, ನಾಗಪ್ಪನನ್ನು ಕಂಡ ಜನರು ದಿಗಿಲುಗೊಂಡಿದ್ದಾರೆ.

ನಾಗರ ಹಾವು, ಕೆರೆ ಹಾವು, ಕೊಳಕು ಮಂಡಲ ಹಾವುಗಳು ಹೆಚ್ಚಾಗಿ ಪತ್ತೆಯಾಗ್ತಿವೆ. ಬೆಂಗಳೂರಿನಲ್ಲಿ 8 ವಲಯಗಳಲ್ಲಿ ಹಾವುಗಳು ಪತ್ತೆಯಾಗಿದ್ದು, ಕಳೆದ ಬಾರಿಗಿಂತ ಈ ವರ್ಷ ಹೆಚ್ಚು ಹಾವುಗಳು ಪತ್ತೆಯಾಗಿವೆ. ಉರಗ ತಜ್ಞರಿಗೆ ಒಂದು ವಲಯದಿಂದ ಸುಮಾರು 20ರಿಂದ 25 ಕರೆಗಳು ಬರುತ್ತಿದೆ. ಮಳೆ ನೀರು ತುಂಬಿಕೊಂಡ ಮನೆಗಳಲ್ಲಿ ಕ್ಲೀನ್ ಮಾಡುವ ವೇಳೆ ಎಚ್ಚರ ವಹಿಸುವಂತೆ ಉರಗ ತಜ್ಞರ ಮೋಹನ್ ಸೂಚಿಸಿದ್ದಾರೆ. ಆದಷ್ಟು ಶೂ ರಾಕ್, ಟಿವಿ ಸ್ಟಾಂಡ್​​​ಗಳ ಬಳಿ ಕೈ ಇಡುವಾಗ ಜಾಗೃತೆ ವಹಿಸಲು ಸಲಹೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES