ಮಧ್ಯಪ್ರದೇಶ : ಮೋದಿ ಹುಟ್ಟುಹಬ್ಬಕ್ಕೆ 8 ಚಿರತೆಗಳು ವಿಶೇಷ ಕೊಡುಗೆ ನೀಡಿದ್ದು, 70 ವರ್ಷದ ಬಳಿಕ ಭಾರತಕ್ಕೆ ಒಟ್ಟು 8 ಚೀತಾಗಳು ಮರಳಿ ಬಂದಿದೆ.
ಮಧ್ಯಪ್ರದೇಶದ ಗ್ವಾಲಿಯರ್ ಏರ್‌ಪೋರ್ಟ್‌ಗೆ 5 ಹೆಣ್ಣು ಹಾಗೂ 3 ಗಂಡು ಚೀತಾಗಳು ಆಗಮಿಸಿದೆ. ಸ್ವತಃ ಮೋದಿಯೇ ಚೀತಾಗಳನ್ನ ಕಾಡಿಗೆ ಬಿಡಲಿದ್ದಾರೆ. ಬೆಳಗ್ಗೆ 10.45ಕ್ಕೆ ಚೀತಾಗಳನ್ನ ಕಾಡಿಗೆ ಬಿಡಲಿರುವ ಪ್ರಧಾನಿ, ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ನಮೀಬಿಯಾದಿಂದ ಭಾರತಕ್ಕೆ ಎಂಟ್ರಿಯಾಗಿದ್ದು, 1947ರಲ್ಲಿ ಕೊನೆಯ ಬಾರಿಗೆ ಆಫ್ರಿಕನ್ ಚೀತಾ ಪತ್ತೆಯಾಗಿತ್ತು. ಛತ್ತೀಸಗಢದ ಕೊರಿಯಾ ಜಿಲ್ಲೆಯಲ್ಲಿ ಚೀತಾ ಪತ್ತೆಯಾಗಿತ್ತು. 1952ರಲ್ಲಿ ಚೀತಾಗಳ ಸಂತತಿ ಅಳಿದು ಹೋಗಿದೆ ಎಂದು ಘೋಷಣೆ ಮಾಡಲಾಗಿತ್ತು ಆದರೆ ಈಗ ಮತ್ತೆ 75 ಕೋಟಿ ಖರ್ಚು ಮಾಡಿ ಭಾರತಕ್ಕೆ ಆಫ್ರಿಕನ್ ಚೀತಾ ಬಂದಿದೆ.
ಕುನೋ ಅರಣ್ಯಕ್ಕೆ ಏಕೆ?
ಕುನೋ ಅರಣ್ಯದಲ್ಲಿ ಅಳಿವಿನ ಪ್ರಭೇದ ಎನಿಸಿದ ಏಷಿಯಾಟಿಕ್ ಸಿಂಹಗಳಿವೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನ ಚೀತಗಳ ವಾಸಕ್ಕೆ ಯೋಗ್ಯವಾಗಿದ್ದು, ಆಫ್ರಿಕನ್ ಚೀತಾಗಳಿಗೆ ವಾಸಕ್ಕೆ ಅನುಕೂಲಕರ ಪರಿಸರವಿದೆ. ಹಾಗೆನೇ ಚೀತಾಗಳ ಬೇಟೆಗಾಗಿ ಚಿಂಕಾರ, ಜಿಂಕೆ ಹಾಗೂ ಕೃಷ್ಣಮೃಗಗಳು ಹೆಚ್ಚಾಗಿವೆ. ಚೀತಾ ವಾಸಕ್ಕೂ ಯೋಗ್ಯವೆನಿಸಿದ ಕಾರಣ ಕುನೋ ಅರಣ್ಯಕ್ಕೆ ಬಿಡಲಾಗ್ತಿದೆ.