Monday, November 25, 2024

ಜಗತ್ತಿನ ಮೊದಲ ಹಾರುವ ಬೈಕ್ ಬಿಡುಗಡೆ: ಭಾರತದಲ್ಲಿ ಯಾವಾಗ ಬಿಡುಗಡೆಗೊಳ್ಳುತ್ತೆ.?

ಜಪಾನ್​ : ಜಗತ್ತಿನ ಮೊಟ್ಟ ಮೊದಲ ಹಾರುವ ಬೈಕ್ ನ್ನ ಜಪಾನ್ ಸ್ಟಾರ್ಟ್ಅಪ್ ಮೂಲಕ ತಯಾರಿಸಿದೆ.

ಗಾಳಿಯಲ್ಲಿ ಹಾರಿ ಹೋಗುವ ಮೊದಲ ಎಕ್ಸ್ ಟುರಿಸ್ಮೊ ಬೈಕ್ ನ್ನ ಜಪಾನಿನ ಸ್ಟಾರ್ಟ್ಅಪ್ ಏರ್ವಿನ್ಸ್ ಟೆಕ್ನಾಲಜೀಸ್ ಮೂಲಕ ಗುರುವಾರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಡೆಟ್ರಾಯಿಟ್ ಆಟೋ ಶೋನಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಕುರಿತು ನ್ಯೂಸ್ ಏಜೆನ್ಸಿ ರಾಯಿಟರ್ಸ್ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇದರಲ್ಲಿ ಬೈಕ್ ಹಾರುಡುವುದು, ಕೆಳಕ್ಕೆ ಇಳಿಯುವುದು ಹೋಗುವುದನ್ನ ಇಲ್ಲಿ ಕಾಣಬಹುದಾಗಿದೆ.

ಈ ಬೈಕ್ ಗರಿಷ್ಠ 60 ರ ವೇಗದಲ್ಲಿ, ಒಂದೆ ಬಾರಿಗೆ ಸುಮಾರು 40 ನಿಮಿಷಗಳವರೆಗೆ ಹಾರಬಲ್ಲದು. ಈಗಾಗಲೇ ಈ ಬೈಕ್ ಜಪಾನದಲ್ಲಿ ಮಾರಾಟಕ್ಕಿಡಲಾಗಿದೆ. ಇನ್ನು ಭಾರತಕ್ಕೆ ಸರಿಸುಮಾರು 2025 ರವೆಳೆಗೆ ಮಾರುಕಟ್ಟೆಗೆ ಲಗ್ಗೆ ಹಿಡುತ್ತದೆ. ಭಾರತದಲ್ಲಿ ಈ ಬೈಕ್ ಗೆ ಅಂದಾಜು 6 ಕೋಟಿ ಎಂದು ಹೇಳಲಾಗಿದೆ.

ಈ ಬೈಕ್ ಎಲೆಕ್ಟ್ರಿಕ್ ಹಾಗೂ ಗ್ಯಾಸೊಲಿನ್ ಚಾಲಿತವಾಗಿದ್ದು, ಕವಾಸಕಿ ಹೈಬ್ರಿಡ್ ಎಂಜಿನ್‌ನಿಂದ ಕೂಡಿದೆ. ಹೋವರ್ ಬೈಕ್ ನ ತೂಕ 300 ಕೆಜಿ ಒಳಗೊಂಡಿದೆ.

RELATED ARTICLES

Related Articles

TRENDING ARTICLES