ನಟ ರಾಕ್ಷಸ, ನಟ ಭಯಂಕರ, ಅಭಿನಯ ಅಂತಾ ಬಂದ್ರೆ ತನ್ನನ್ನೇ ಮರೆಯೋ ಅಭಿನಯ ವಿಶಾರದ ಡಾಲಿ ಧನಂಜಯ ನಟನೆಯ ಮಾನ್ಸೂನ್ ರಾಗ ಸಿನಿಮಾ ತೆರೆಗೆ ಕಂಡಿದೆ. ರಾಜ್ಯಾದ್ಯಂತ ಮತ್ತೆ ಮಾನ್ಸೂನ್ ಎಫೆಕ್ಟ್ಗೆ ಪ್ರೇಕ್ಷಕರು ಥಂಡಾ ಹೊಡೆದಿದ್ದಾರೆ. ಯೆಸ್.. ರಚ್ಚು ಕಣ್ಣುಗಳಲ್ಲೇ ಮಿಂಚಿದ್ರೆ, ಡಾಲಿ ನಟನೆಯ ಮೂಲಕ ಗುಡುಗಿದ್ದಾನೆ. ಹೇಗಿದೆ ಮಾನ್ಸೂನ್ ರಾಗ ಕಥೆ..? ಸಿನಿಮಾ ನೋಡಿದ ಪ್ರೇಕ್ಷಕರು ಏನಂದ್ರು..? ಸಿನಿಮಾದ ಪ್ಲಸ್ ಮೈನಸ್ ಏನು..? ನಾವ್ ಹೇಳ್ತೀವಿ. ನೀವೇ ಓದಿ.
- ಡೊಳ್ಳು ಕುಣಿತದೊಂದಿಗೆ ನಟರಾಕ್ಷಸನಿಗೆ ಗ್ರ್ಯಾಂಡ್ ವೆಲ್ಕಮ್
ಡಾಲಿ, ರಚ್ಚು ಕಾಂಬೋದಲ್ಲಿ ವಿಭಿನ್ನ ಸಿನಿಮಾವೊಂದು ಸೆಟ್ಟೇರ್ತಿದೆ ಎಂದಾಗ್ಲೇ ಚಿತ್ರಪ್ರೇಮಿಗಳ ಎದೆಯಲ್ಲಿ ಹೊಸ ಬಡಿತ ಶುರುವಾಗಿತ್ತು. ಇಂದು ರಾಜ್ಯಾದ್ಯಂತ ರಿಲೀಸ್ ಆಗಿರೋ ಮಾನ್ಸೂನ್ ರಾಗ ಸಿನಿಮಾ ನೋಡಿ ಪ್ರೇಕ್ಷಕರ ದಿಲ್ ಖುಷ್ ಆಗಿದ್ದು, ಇಟ್ಟ ನಿರೀಕ್ಷೆಗಳೆಲ್ಲಾ ನಿಜವಾಗಿವೆ. ಇನ್ನು ಥಿಯೇಟರ್ ಮುಂದೆ ಸಡಗರ ಸಂಭ್ರಮ ಮುಗಿಲು ಮುಟ್ಟಿತ್ತು.
ಕನ್ನಡದಲ್ಲಿ ಹೊಸ ಬಗೆ, ಹೊಸತನದ ಕಥೆಯೊಂದಿಗೆ ರಾಜ್ಯಾದ್ಯಂತ ರಿಲೀಸ್ ಅಗಿರೋ ಮಾನ್ಸೂನ್ ರಾಗ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ಥಿಯೇಟರ್ ಮುಂದೆ ಮಾನ್ಸೂನ್ ಸಿನಿಮಾದ ಕಟೌಟ್ಗಳು ರಾರಾಜಿಸುತ್ತಿದ್ದು, ಡೊಳ್ಳು ಕುಣಿತದೊಂದಿಗೆ ಫಸ್ಟ್ ಡೇ ಫಸ್ಟ್ ಶೋನ ಗ್ರ್ಯಾಂಡ್ ವೆಲ್ಕಮ್ ಮಾಡಲಾಗಿದೆ.
ಚಿತ್ರ: ಮಾನ್ಸೂನ್ ರಾಗ
ನಿರ್ದೇಶನ: ಎಸ್. ರವೀಂದ್ರನಾಥ್
ನಿರ್ಮಾಣ: ಎ.ಆರ್ ವಿಖ್ಯಾತ್
ಸಂಗೀತ: ಜೆ. ಅನೂಪ್ ಸೀಳಿನ್
ಸಿನಿಮಾಟೋಗ್ರಫಿ: ಎಸ್. ಕೆ ರಾವ್
ತಾರಾಗಣ: ಡಾಲಿ ಧನಂಜಯ, ರಚಿತಾ ರಾಮ್, ಯಶಾ ಶಿವಕುಮಾರ್, ಸುಹಾಸಿನಿ ಮಣಿರತ್ನಂ, ಅಚ್ಯುತ್ ಕುಮಾರ್ ಮುಂತಾದವರು.
ಮಾನ್ಸೂನ್ ರಾಗ ಸ್ಟೋರಿಲೈನ್
ಇಲ್ಲಿವರೆಗೂ ನೋಡಿರದ ಪಾತ್ರದಲ್ಲಿ ಡಾಲಿಯನ್ನು ಕಣ್ತುಂಬಿಕೊಳ್ಳೋ ಛಾನ್ಸ್ ನಿಮ್ಮದಾಗಲಿದೆ. ಸಿನಿಮಾದಲ್ಲಿ ನಾಲ್ಕು ಪ್ರೇಮ ಕಥೆಗಳು ನಿಮ್ಮನ್ನು ಪ್ರೇಮಲೋಕದಲ್ಲಿ ಸುತ್ತಾಡಿಸುತ್ತವೆ. ತೆರೆಯ ಮೇಲಿನ ರಣ ರಣ ಮಳೆಯ ನಡುವೆ ಪ್ರೀತಿಯ ಸೆಳೆತ ನಿಮ್ಮನ್ನು ಕಥೆಗೆ ಹತ್ತಿರವಾಗಿಸುತ್ತವೆ. ಯೆಸ್.. ಸಿನಿಮಾದಲ್ಲಿ ಎಲ್ಲಾ ವಯೋಮಾನದ ಅನುರಾಗ ಸಂಗಮವಿದೆ. ರಚ್ಚು ಡಾಲಿ ಪ್ರೇಮ ಸಂಬಂಧ ನಿಮ್ಮನ್ನು ಗಿರಕಿ ಹೊಡೆಸಿದ್ರು, ನಿಮ್ಮನ್ನೇ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡುತ್ತದೆ. ಜಾತಿ, ಧರ್ಮ, ಸ್ನೇಹ, ಪ್ರೀತಿ, ವಯಸ್ಸಿನ ಅಂತರವಿಲ್ಲದ ಅನುರಾಗವನನ್ನು ಮಳೆಯೊಂದಿಗೆ ತಳುಕು ಹಾಕಿದ್ದಾರೆ ನಿರ್ದೇಶಕ ರವೀಂದ್ರನಾಥ್.
ಶಾಲೆಯಲ್ಲಿ ಅರಳುವ ಸ್ವಚ್ಛ ಪ್ರೀತಿ, ಯಂಗ್ ಏಜ್ ಲವ್ ಸ್ಟೋರಿ, ಸೆಕ್ಸ್ ವರ್ಕರ್ ಜತೆಗೆ ಬಾರ್ ಬಾರ್ ಕಹಾನಿ, ಇಳಿ ವಯಸ್ಸಿನ ಆಸರೆಯ ಪ್ರೇಮ, ಎಲ್ಲವೂ ಒಂದೊಂದು ದಾರಿ. ಕೊನೆಗೆ ಎಲ್ಲವೂ ಕ್ಲೈಮ್ಯಾಕ್ಸ್ನಲ್ಲಿ ಸೇರುವಾಗ ಸಖತ್ ಥ್ರಿಲ್ಲಿಂಗ್ ಅನುಭವ ಸಿಗೋದು ಪಕ್ಕಾ. ಇದೆ ಕಥೆಯ ತಿರುಳು.
ಮಾನ್ಸೂನ್ ರಾಗ ಆರ್ಟಿಸ್ಟ್ ಪರ್ಫಾಮೆನ್ಸ್
ಬಾರ್ ಸಪ್ಲೈಯರ್ ಆಗಿ ಸಂಪೂರ್ಣ ಡಿಫರೆಂಟ್ ರೋಲ್ನಲ್ಲಿ ಡಾಲಿ ಕಂಡ್ರೆ, ಸೆಕ್ಸ್ ವರ್ಕರ್ ರೋಲ್ನಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ರಚ್ಚು ಅಚ್ಚರಿ ಮೂಡಿಸಿದ್ದಾರೆ. ಯಶಾ ಆಟಿಟ್ಯೂಡ್ ಗರ್ಲ್ ಆಗಿ ಚಮ್ಕಾಯಿಸಿದ್ದಾರೆ. ಜತೆಗೆ ಅಚ್ಯುತ್ ಅಗೈನ್ ಪರಕಾಯ ಪ್ರವೇಶ ಮಾಡಿದ್ದಾರೆ. ಸುಹಾಸಿನಿಯ ಹಾಸ ಇಲ್ಲೂ ಕಂಟಿನ್ಯೂ ಆಗಿದೆ. ಬಾಲ ಕಲಾವಿದ ನಿಹಾಲ್, ಸಿಂಚನಾ ಸಿಕ್ಸರ್ ಬಾರಿಸಿದ್ದಾರೆ. ಸಿನಿಮಾದಲ್ಲಿ ಎಲ್ಲವೂ ಸಮತೋಲನವಾಗಿದೆ.
ಮಾನ್ಸೂನ್ ರಾಗ ಪ್ಲಸ್ ಪಾಯಿಂಟ್ಸ್
ವಿಶ್ಯುಯೆಲ್ ಟ್ರೀಟ್
ಕಣ್ಮನ ತಣಿಸೋ ಲೊಕೇಷನ್ಸ್
ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್
ಕ್ಯಾಮೆರಾ ಕೈಚಳಕ
ಡಾಲಿ ವಿಭಿನ್ನ ಮ್ಯಾನರಿಸಂ
ರಚ್ಚು ಬೋಲ್ಡ್ ಕ್ಯಾರೆಕ್ಟರ್
ಮಾನ್ಸೂನ್ ರಾಗ ಮೈನಸ್ ಪಾಯಿಂಟ್ಸ್
ತೆಲುಗಿನ ಕೇರ್ ಆಫ್ ಕಂಚಾರಪಾಲೆಂ ಚಿತ್ರದ ರಿಮೇಕ್ ಕಥೆ ಇದಾಗಿದ್ದು, ಅದೇ ಕಥೆಗೆ ಸ್ವಲ್ಪ ಮಸಾಲೆ ಬೆರಸಲಾಗಿದೆ. ಮಳೆಯ ಪ್ಲೇವರ್ನಲ್ಲಿ ಸಿನಿಮಾ ವಿಭಿನ್ನವಾಗಿದ್ದರೂ ಡಾಲಿ ಎಲ್ಲ ಇಮೇಜ್ ಮರೆತು ಸಿನಿಮಾ ಮಾಡಿದ್ದಾರೆ. ಲೈವ್ ಮ್ಯಾಚ್ ನೋಡಿದ್ದರೂ, ಈ ಸಿನಿಮಾ ಹೈಲೈಟ್ಸ್ನಂತೆ ಮನರಂಜನೆ ನೀಡಲಿದೆ.
ಮಾನ್ಸೂನ್ ರಾಗ ಪವರ್ ಟಿವಿ ರೇಟಿಂಗ್: 3.5/5
ಮಾನ್ಸೂನ್ ರಾಗ ಫೈನಲ್ ಸ್ಟೇಟ್ಮೆಂಟ್
ಪುಟ್ಟಣ್ಣ ಕಣಗಲ್ ನಿರ್ದೇಶನದ ಕಥಾಸಂಗಮ ಸಿನಿಮಾ ನೆನಪಿಸುವ ವಿಭಿನ್ನ, ವಿಶಿಷ್ಠ ಸಿನಿಮಾ ಮಾನ್ಸೂನ್ ರಾಗ. ಎಸ್.ಕೆ ರಾವ್ ಕ್ಯಾಮೆರಾ ಕಣ್ಣಲ್ಲಿ ಕರಾವಳಿ ಸೌಂದರ್ಯ ಮಜಭೂತಾಗಿದೆ. ಜತೆಗೆ ಪ್ರತಿ ಫ್ರೇಮಿನಲ್ಲೂ ಮಳೆಯ ಹನಿಗಳು ಕಣ್ಣಿಗೆ ರಾಚುತ್ತವೆ. ವಿಖ್ಯಾತ್ ಭರವಸೆಯ ಮೇಲೆ ನಿರ್ಮಾಣವಾದ ಸಿನಿಮಾಗೆ ಪ್ರೇಕ್ಷಕ ಒಪ್ಪಿ ಅಪ್ಪಿದ್ದಾನೆ. ಎನಿವೇ ವೀಕೆಂಡ್ಗೆ ಒಂದೊಳ್ಳೆ ಸಿನಿಮಾ ನೋಡ್ಬೇಕಾದ್ರೆ ಮಾನ್ಸೂನ್ ರಾಗ ಸಿನಿಮಾ ನೋಡಿ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ