Sunday, November 24, 2024

ಮಾಗಬೇಕಿರೋ ಮನಸುಗಳ ಚಿಂತನ ಮಂಥನದ ತೋತಾಪುರಿ

ತೊಟ್ಟು ಬೊಟ್ಟು ಅಂತ ಹಸಿಬಿಸಿ ಡೈಲಾಗ್​ಗಳಿದ್ರೂ ಅದ್ರ ಒಳಗಿರೋ ಘಮಲೇ ಬೇರೆ. ಯೆಸ್. ತೋತಾಪುರಿ ಮಾಗಬೇಕಿರೋ ಮನಸುಗಳ ಚಿಂತನ ಹಾಗೂ ಮಂಥನದ ಕಥೆ. ನೀರ್​ದೋಸೆ ಜೋಡಿಗಳ ಹೊಸ ಮೋಡಿ. ಬೃಹತ್ ತಾರಾಗಣದ ಪ್ಯಾನ್ ಇಂಡಿಯಾ ಎಂಟರ್​ಟೈನರ್. ನವರಾತ್ರಿಗೆ ರಂಗೇರಲಿರೋ ಭಾವೈಕ್ಯತೆಯ ಭಾವನಾತ್ಮಕ ಕಥಾನಕದ ಝಲಕ್ ನಿಮಗಾಗಿ.

  • ನೀರ್​ದೋಸೆ ಜೋಡಿಯಿಂದ ಪ್ಯಾನ್ ಇಂಡಿಯಾ ಮೆಗಾ ಮೋಡಿ

ಸಿನಿಮಾದ ಮೂಲ ಉದ್ದೇಶ ಮನರಂಜನೆಯೇ ಆದ್ರೂ ಸಹ, ಅದನ್ನ ಮೀರಿ ಪ್ರೇಕ್ಷಕನಿಗೆ ನಿರ್ದೇಶಕ ಮತ್ತೆ ಇನ್ನೇನನ್ನೋ ನೀಡಬೇಕಾಗುತ್ತೆ. ಅದು ಬದುಕಿನ ಸಾರ, ಸಂಬಂಧಗಳ ಮೌಲ್ಯ, ಸಾಮಾಜಿಕ ಸಾಮರಸ್ಯ, ಭಾವೈಕ್ಯತೆಯ ಸಂದೇಶ ಹೀಗೆ ಏನಾದ್ರೂ ಆಗಿರಬಹುದು. ಸದ್ಯ ಇದೇ ಸೆಪ್ಟೆಂಬರ್ 30ಕ್ಕೆ ಬರ್ತಿರೋ ತೋತಾಪುರಿ ಕೂಡ ಮಾಗಬೇಕಿರೋ ಮನಸುಗಳ ಚಿಂತನ ಹಾಗೂ ಮಂಥನದ ಕಥಾನಕವಾಗಿದೆ.

ನವರಸನಾಯಕ ಜಗ್ಗೇಶ್, ಡಾಲಿ ಧನಂಜಯ, ಅದಿತಿ ಪ್ರಭುದೇವ ಹಾಗೂ ಸುಮನ್ ರಂಗನಾಥ್​ರಂತಹ ಅತ್ಯದ್ಭುತ ಕಲಾವಿದರ ಸಮಾಗಮದಲ್ಲಿ ತಯಾರಾಗಿರೋ ಬಿಗ್ಗೆಸ್ಟ್ ಮಲ್ಟಿಸ್ಟಾರ್ ಮೂವಿ ತೋತಾಪುರಿ. ನೀರ್​ದೋಸೆ ಚಿತ್ರತಂಡದ ಕಾಂಬೋ ಇದಾಗಿದ್ದು, ನಿರ್ದೇಶಕ ವಿಜಯ್ ಪ್ರಸಾದ್ ಮತ್ತೆ ಎಮೋಷನಲ್ ವಿಚಾರಗಳನ್ನ ಎಂಟರ್​ಟೈನಿಂಗ್ ಆಗಿ ಹೇಳೋ ಪ್ರಯತ್ನ ಮಾಡಿದ್ದಾರೆ. ಅದ್ರ ಹಿಂದಿನ ಅಸಲಿ ರೂವಾರಿ ನಿರ್ಮಾಪಕ ಕೆ.ಎ. ಸುರೇಶ್.

ತೊಟ್ಟು, ಬೊಟ್ಟು ಅನ್ನೋ ಅಂತಹ ಹಸಿಬಿಸಿ ಡೈಲಾಗ್​ಗಳಿದ್ರೂ ಸಹ, ವಿಜಯ್ ಪ್ರಸಾದ್ ಮಾತ್ರ ಎಮೋಷನಲ್ ವಿಚಾರಗಳನ್ನ ತಮ್ಮದೇ ಶೈಲಿಯಲ್ಲಿ ಹೇಳಲು ಹೊರಟಿದ್ದಾರೆ. ಅವ್ರ ಬರವಣಿಗೆಗೆ ಪೂರಕವಾಗಿ ಜಗ್ಗಣ್ಣ, ಡಾಲಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದ್ರಲ್ಲೂ ಇದು ಜಗ್ಗೇಶ್ ನಾಲ್ಕೂವರೆ ದಶಕದ ಸಿನಿಯಾನದಲ್ಲಿ ಬಹುದೊಡ್ಡ ಸಿನಿಮಾ. ಕಾರಣ ಇದೇ ಮೊದಲ ಬಾರಿ ಪ್ಯಾನ್ ಇಂಡಿಯಾ ರಿಲೀಸ್ ಹಾಗೂ ಎರಡೆರಡು ಭಾಗಗಳಲ್ಲಿ ತಯಾರಾಗಿರೋ ಚಿತ್ರ.

ಇತ್ತೀಚೆಗೆ ನಡೆಯುತ್ತಿರೋ ಕೋಮು ಗಲಭೆಗಳಿಗೆ ಒಂಥರಾ ಮುಲಾಮು ಆಗಲಿದೆ ತೋತಾಪುರಿ. ಇಲ್ಲಿ ಜಾತಿ, ಧರ್ಮ, ಮತಗಳನ್ನ ಮೀರಿದ ಸಂಬಂಧಗಳು, ಬಾಂಧವ್ಯಗಳು, ಭಾವನೆಗಳಿವೆ. ಹಾಗಾಗಿ ನಿರ್ಮಾಪಕ ಕೆ.ಎ ಸುರೇಶ್ ಅವ್ರ ಬ್ಯಾನರ್​ಗೆ ತೋತಾಪುರಿ ನಿಜಕ್ಕೂ ಒಂದು ಹೊಸ ಕಳಶಪ್ರಾಯವಾಗಲಿದೆ. ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಉಳಿಯಲಿದೆ. ಇದೇ ಸೆಪ್ಟೆಂಬರ್ 30ಕ್ಕೆ ದಸರಾ ಪ್ರಯುಕ್ತ ಬಿಗ್ ಸ್ಕ್ರೀನ್ ಮೇಲೆ ದರ್ಬಾರ್ ಮಾಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES