ಬೆಂಗಳೂರು : ಬೆಂಗಳೂರಿನಂತ ನಗರದಲ್ಲಿ ಟೋಯಿಂಗ್ ಅವಶ್ಯಕತೆ ಇದೆ ಎಂದು ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಹೇಳಿದರು.
ನಗರದಲ್ಲಿ ಟೋಯಿಂಗ್ ಇರ್ಬೇಕು. ಆದ್ರೆ ಅದರ ನಿಯಮಗಳು ಬದಲಾಗಬೇಕು, ಹೈಕೋರ್ಟ್ ಟೋಯಿಂಗ್ ಬಗ್ಗೆ ಪರಿಶೀಲನೆಗೆ ಕಾಲಾವಕಾಶ ನೀಡಿದ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಟೋಯಿಂಗ್ ಕುರಿತು ಪ್ರತಿಕ್ರಿಯಿಸಿದ್ದಾರೆ.
ಇನ್ನು, ರಸ್ತೆ ಸಂಚಾರಕ್ಕೆ ಅಡ್ಡಲಾಗಿ ನಿಲ್ಲಿಸುವ ವಾಹನಗಳನ್ನ ಟೋ ಮಾಡುವ ಅವಶ್ಯಕತೆ ಇದೆ. ಆದ್ರೆ ಈ ನಿಯಮದಲ್ಲಿ ಕೆಲವು ಲೋಪದೋಷಗಳು ಹಾಗೂ ದೂರುಗಳು ಕೂಡ ಕೇಳಿ ಬಂದಿದೆ. ಸದ್ಯ ಟೋಯಿಂಗ್ನ ಯಾವ ರೀತಿಯಲ್ಲಿ ಯಾವ ನಿಯಮಗಳ ಅಡಿಯಲ್ಲಿ ಮಾಡಬೇಕು ಅನ್ನೋದನ್ನ ಇಲಾಖೆ ನಿರ್ಧಾರ ಮಾಡುತ್ತೆ. ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯಾಗಿ ದೂರು ಬರದೆ ರೀತಿಯಲ್ಲಿ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಪ್ರತಾಪ್ ರೆಡ್ಡಿ ಹೇಳಿದ್ದಾರೆ.