ಬೆಂಗಳೂರು : ಬ್ರಿಟನ್ ರಾಣಿ ಎಲಿಜಬೆತ್ ನಿಧನವಾದ ಹಿನ್ನೆಲೆಯಲ್ಲಿ ಲಂಡನ್ ಸೇರಿ ಬ್ರಿಟನ್ನೆಲ್ಲೆಡೆ ಶೋಕಾಚರಣೆ ಮಡುಗಟ್ಟಿದೆ. ಈ ನಡುವೆ ಬ್ರಿಟಿಷ್ ರಾಜಮನೆತನದ ರಾಣಿ ಎಲಿಜಬೆತ್ -2 1961ರಲ್ಲಿ ಭಾರತದ ತನ್ನ ಮೊದಲ ಭೇಟಿಯ ಸಮಯದಲ್ಲಿ ಬೆಂಗಳೂರಿನ ಲಾಲ್ಬಾಗ್ ಉದ್ಯಾನವನಕ್ಕೆ ಭೇಟಿ ನೀಡಿದ್ದ ಸಂದರ್ಭ ವನ್ನು ನೆನಪಿಸುತ್ತಿದ್ದಾರೆ. ಆಗ ಉದ್ಯಾನವನದಲ್ಲಿ ಕ್ರಿಸ್ಮಸ್ ಟ್ರೀಯನ್ನು ನೆಟ್ಟಿದ್ದರು. 60 ವರ್ಷಗಳ ನಂತರ ಕೂಡ
ಆ ಕ್ರಿಸ್ಮಸ್ ಟ್ರೀ 60 ಅಡಿ ಎತ್ತರದಲ್ಲಿದೆ. ಫೆಬ್ರವರಿ 21, 1961 ರಂದು, ರಾಣಿ ಎಲಿಜಬೆತ್ -2 ಲಾಲ್ಬಾಗ್ ಸೇರಿ ಬೆಂಗಳೂರಿನ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದರಲ್ಲದೆ, ರಾಜಧಾನಿಯಿಂದ 60 ಕಿಮೀ ದೂರದಲ್ಲಿರುವ ನಂದಿ ಬೆಟ್ಟದಲ್ಲಿ ರಾಣಿ ತಂಗಿದ್ದರು. ಅಂದಿನ ರಾಜ್ಯಪಾಲ ಹಾಗೂ ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜ ಒಡೆಯರ್ ಇಂಗ್ಲೆಂಡ್ ರಾಣಿಯನ್ನು ಭವ್ಯ ಸ್ವಾಗತಿಸಿದ್ದರು. ಅವರ ಜೊತೆಗೆ ಆಗಿನ ಮುಖ್ಯಮಂತ್ರಿ ಬಿ.ಡಿ.ಜತ್ತಿ ಮತ್ತು ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು ಅಂತ ಲಾಲ್ಬಾಗ್ ಉಪನಿರ್ದೇಶಕಿ ಕುಸುಮಾ ಮಾಹಿತಿ ನೀಡಿದ್ರು.
ಇನ್ನು ರಾಣಿ ನೆಟ್ಟಿದ್ದ ಆ ಟ್ರೀನಿಂದ ಸ್ವಲ್ಪ ದೂರದಲ್ಲೇ, ಪಾಕಿಸ್ತಾನದ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಗಫಾರ್ ಖಾನ್ ಅವರು ನೆಟ್ಟಿದ್ದ ಮತ್ತೊಂದು ಕ್ರಿಸ್ಮಸ್ ಟ್ರೀ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಭೇಟಿ ನೀಡಿದ್ದಾಗ ನೆಟ್ಟ ಸರಕಾರ ಅಶೋಕ ಮರವನ್ನು ನೆಟ್ಟಿದ್ದರು. ರಾಣಿ ಎಲಿಜಬೆತ್ ಅವರು ಗಿಡ ನೆಡುವಾಗ ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಎಂ.ಹೆಚ್.ಮರಿಗೌಡ ಅವರು ಜೊತೆಗಿದ್ದಿದ್ದು ಲಾಲ್ಬಾಗ್ ಇತಿಹಾಸದಲ್ಲಿ ದಾಖಲಾಗಿದೆ ಎಂದು ಕುಸುಮಾ ತಿಳಿಸಿದ್ದಾರೆ.
HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಣಿಯನ್ನು ತೆರೆದ ಕಾರಿನಲ್ಲಿ ಕರೆದೊಯ್ಯಲಾಗಿತ್ತಂತೆ ಅಲ್ಲದೆ, ರಾಣಿಯನ್ನು ನೋಡಲು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದರಂತೆ. ಬೈಬಲ್ ಸೊಸೈಟಿ ಆಫ್ ಇಂಡಿಯಾದಿಂದ ಅವರನ್ನು ಸನ್ಮಾನಿಸಲಾಗಿತ್ತಂತೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಕೂಡ ಆಗುತ್ತಿದೆ.
ಒಟ್ಟಿನಲ್ಲಿ ತೆರೆದ ಕಾರಿನಲ್ಲಿ ಆಸೀನರಾಗಿದ್ದ ರಾಣಿ, ನೆರೆದಿದ್ದ ಜನಸ್ತೋಮಕ್ಕೆ ಕೈಬೀಸಿ ವಂದಿಸಿದ್ದು, ರಾಣಿ ಜನರತ್ತ ಕೈಬೀಸಬೇಕೆಂದೇ ಪ್ರತಿ ಜಂಕ್ಷನ್ನಲ್ಲಿಯೂ ಕಾರನ್ನು ನಿಲ್ಲಿಸಲಾಗುತ್ತಿದ್ದುದನ್ನು ಅಂದಿನ ಜನ ಈಗ ನೆನಪಿಸುತ್ತಿದ್ದಾರೆ . ಅದೇನೇ ಆಗ್ಲಿ ರಾಣಿ ಸಾವನ್ನಪ್ಪಿದ್ರೂ ರಾಜಧಾನಿಯಲ್ಲಿಯಲ್ಲಿ ಮಾತ್ರ ಅವರ ನೆನಪು ಕ್ರಿಸ್ಮನ್ಸ್ ಟ್ರೀ ಮೂಲಕ ಶಾಶ್ವವಾಗಿದೆ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯುರೋ ಬೆಂಗಳೂರು