ಬೆಂಗಳೂರು: ಕೊಡಗಿನಲ್ಲಿ ಮಳೆ ಹಾನಿ ವೇಳೆ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ವಿಚಾರವಾಗಿ ಇಂದು ಆಡಳಿತ ಹಾಗೂ ವಿಪಕ್ಷಗಳ ನಡುವೆ ಅಧಿವೇಶನದಲ್ಲಿ ವಾಕ್ಸಮರ ನಡೆಯಿತು.
ಈ ಬಗ್ಗೆ ಅಧಿವೇಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಮಳೆ ಹಾನಿ ನಷ್ಟ ನೊಡಲು ಪರಿಶೀಲನೆಗೆ ಕೊಡಗು ಚಿಕ್ಕಮಗಳೂರು ಜಿಲ್ಲೆ ನಗರಕ್ಕೆ ಹೋಗಿದ್ದೆ, ಡಿಸಿ ಕಚೇರಿ ಹತ್ರ ಗೋಡೆ ಕಟ್ಟಿದ್ದಾರೆ ಅದು ಬಿದ್ದು ಹೋಗಿದೆ. ಅದು ನೋಡಲು ಹೋಗುತ್ತಿದ್ದೆ. ಆದರೆ, ಅಲ್ಲಿ ನನಗೆ ಕಪ್ಪು ಬಾವುಟ ತೋರಿಸಿ ಮೊಟ್ಟೆ ಹೊಡೆಯಲು ಶುರುಮಾಡಿದರು ಎಂದರು.
ಈ ವೇಳೆ ಸ್ಪೀಕರ್ ಕಾಗೇರಿ ಮಧ್ಯಪ್ರವೇಶಿಸಿ, ಅದು ಬೇರೆ ಯಾವುದೋ ಕಾರಣಕ್ಕೆ ಎಂದು ಬರುತ್ತಿತ್ತು ಎಂದರು. ನಿಮಗೆ ಗೊತ್ತಾ ಎಂದು ಮರು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ಯಾವ ಕಾರಣ ಎಂದು ಗೊತ್ತಿಲ್ಲ ಎಂದರು. ವೀರ ಸಾವರ್ಕರ್, ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿದ್ದೀರಿ ಆಗ ಈ ಘಟನೆ ಸಂಭವಿಸಿದೆ ಎಂದು ಕೆಜಿ ಬೋಪಯ್ಯ ಹೇಳಿದರು. ಇದಕ್ಕೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಸಾಥ್ ನೀಡಿ ಮೊಟ್ಟೆ ಹೊಡೆದಿದ್ದು ನಿಮ್ಮ ಪಕ್ಷದವರೇ ಎಂದರು.
ಈ ಬಗ್ಗೆ ಮತ್ತೆ ಮಾತನಾಡಿದ ಸಿದ್ದರಾಮಯ್ಯ, ಕೂತ್ಕೊಳ್ರಿ, ಮೊಟ್ಟೆ ಎಸೆ ಆರೋಪಿಗಳನ್ನ ಹೋಗಿ ಬಿಡಿಸಿಕೊಂಡು ಬಂದವರು ನೀವೇ ತಾನೆ ಎಂದು ಅಪ್ಪಚ್ಚು ರಂಜನ್ ತರಾಟೆಗೆ ಸಿದ್ದರಾಮಯ್ಯ ತೆಗೆದುಕೊಂಡರು. ನಿಮ್ಮ ಜತೆಗೆ ಆರೋಪಿ ಪೋಟೋ ಇದೆ. ನಿಮ್ಮ ಜೊತೆಗಿರುವುದು ನಾಚಿಕೆ ಆಗಲ್ವಾ, ಇದನ್ನೆಲ್ಲ ಎಲ್ಲ ಅಪ್ಪಚ್ಚು ರಂಜನ್ ಮಾಡಿಸಿದ್ದು, ನನಗೆ ಇದರ ಹತ್ತರಷ್ಟು ಮಾಡಲು ಬರುತ್ತೆ ನೀವೊಬ್ಬರೇ ಪಾಲೇಗಾರರಾ? ಈ ಷಡ್ಯಂತ್ರಕ್ಕೆ ಹೆದರಲ್ಲ ನಾವು ಎಂದ ಸಿದ್ದರಾಮಯ್ಯ ಅವರು ಅಪ್ಪಚ್ಚು ರಂಜನ್ಗೆ ಚಳಿ ಬಿಡಿಸಿದ್ದಾರೆ.
ಮೊಟ್ಟೆ ಎಸೆದರೆ ಬಹಳ ವೀರರು ಶೂರರೇ? ಇದಕ್ಕೆಲ್ಲಾ ಹೆದರುವ ಮಕ್ಕಳು ನಾವಲ್ಲ. ಇಡೀ ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ನಾನು ಮಾಡಿಸ್ತಿನಿ. ಆದರೆ, ನಾನು ಆ ಕೆಲಸ ಮಾಡಿಸಲ್ಲ. ಟಿಪ್ಪು ಪೇಟ ಹಾಕೊಂಡು ಖಡ್ಗ ಹಿಡಿದಿದ್ರಲ್ಲ ನಾಚಿಕೆ ಆಗಲ್ವಾ, ಕೊಡಗಿನಲ್ಲಿ ಒಂದು ರೂಪಾಯಿ ಅಭಿವೃದ್ಧಿ ಆಗಿಲ್ಲ. ಕೊಡಗಿನ ಜನ ಒಳ್ಳೆಯವರು ನಿಮ್ಮ ನಡವಳಿಕೆಯಿಂದ ಕೊಡಗು ಹಾಳಾಗುತ್ತಿದೆ. ಇವೆಲ್ಲ ಮಾಡಲು ಹೋಗಬಾರದು ಎಂದು ಸಿದ್ದರಾಮಯ್ಯ ತಿಳಿಸಿದರು.