Monday, December 23, 2024

ತವರು ಸೇರಿದ ಪತ್ನಿ ಮೇಲೆ ಪತಿ ಫೈರಿಂಗ್​

ಚಿಕ್ಕೋಡಿ : ಗಂಡನ ಮನೆಗೆ ಬರುವಂತೆ ಒತ್ತಾಯಿಸಿ ಎರಡು ಸುತ್ತು ಗುಂಡು ಹಾರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಶಿವಾನಂದ ಕಾಗಲೇ(೪೦) ಹೆಂಡತಿಯ ಮೇಲೆ ಫೈರಿಂಗ್ ಮಾಡಿದ ಭೂಪ, ಗಂಡನ ಅನೈತಿಕ ಸಂಬಂಧ ಹಿನ್ನೆಲೆ ತವರು ಸೇರಿದ ಹೆಂಡತಿ, ವಾಪಸ್ ಮನೆಗೆ ಬರ್ತಿಯೋ ಇಲ್ವೋ ಅಂತ ಕೇಳಿ ಗುಂಡು ಹಾರಿಸಿದ್ದಾನೆ. ತವರು ಮನೆಗೆ ಬಂದು ಹೆಂಡತಿಯ ಮೇಲೆ ಗುಂಡು ಹಾರಿಸಿ ಕೊಲ್ಲುವುದಾಗಿ ಧಮ್ಕಿ ನೀಡಿದ್ದಾನೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಶಿವಾನಂದ ಹಾಗೂ ಪ್ರೀತಿ ದಂಪತಿ, ಈ ಮಧ್ಯೆ ಶಿವಾನಂದ ಪರಸ್ತ್ರೀ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ, ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನೆ ಮಾಡಿ ತವರು ಸೇರಿದ್ದ ಪ್ರೀತಿ, ಬೆಳಗಾವಿ ಜಿಲ್ಲೆಯ ಅಥಣಿಗೆ ಬಂದು ತನ್ನ ತಾಯಿಯೊಂದಿಗೆ ವಾಸವಿದ್ದರು. ನೀನು ಮನೆಗೆ ಬರಲೇಬೇಕು ಅಂತ ಲೈಸೆನ್ಸಡ್ ರಿವಾಲ್ವಾರ್ ಜತೆಗೆ ಮನೆಗೆ ಬಂದಿದ್ದ ಶಿವಾನಂದ, ಎರಡು ಗುಂಡು ಹಾರಿಸಿ ನಾಲ್ಕು ಗುಂಡು ಬಾಕಿ ಇಟ್ಟುಕೊಂಡಿದ್ದ ಮನೆಗೆ ಬರಲಿಲ್ಲವೆಂದರೆ ಎರಡು ಗುಂಡು ನಿನಗೆ ಹಾರಿಸಿ ಎರಡು ಗುಂಡು ನಾನು ಹಾರಿಸಿಕೊಳ್ತಿನಿ ಅಂತ ಧಮ್ಕಿ ನೀಡಿದ್ದಾನೆ. ಪತ್ನಿ ನೀಡಿದ ದೂರಿನನ್ವಯ ಶಿವಾನಂದ ಅಥಣಿ ಪೊಲೀಸರು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES