ಬೆಂಗಳೂರು : ಕಳೆದ ವಾರ ಬೆಂಗಳೂರಿನ ಮಹದೇವಪುರ ವಲಯ ಮತ್ತು ಪೂರ್ವ ವಲಯದಲ್ಲಿ ಸಾಕಷ್ಟು ಮಳೆಯಾಗಿತ್ತು. ಅದರಲ್ಲೂ ಸರ್ಜಾಪುರ ರೈನ್ ಬೋ ಲೇಔಟ್, ಬೆಳ್ಳಂದೂರು ಇಕೋ ಸ್ಪೇಸ್ ಅಂತ ಸಮುದ್ರದ ಅಳೆಗಳಂತೆ ಅಪ್ಪಳಿಸುತ್ತಿತು. ನೀರು ಮನೆಗಳಿಗೆ ಸೇರಿದ ಹಿನ್ನೆಲೆ ರೈನ್ ಬೋ ಲೇಔಟ್ ನಿವಾಸಿಗಳು ಮನೆ ನೀರು ತೆರವು ಮಾಡಲಾಗದೆ, ಸಂಬಂಧಿಕರು, ಸ್ನೇಹಿತರ ಮನೆಗೆ ಹೋಗಿದ್ರು.ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಕರೆಂಟ್, ಸಿಸಿಟಿವಿ ಇಲ್ಲದ ಕಡೆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿದ್ದಾರೆ.
ಮಳೆ ಬಿದ್ದ ಮೂರು ದಿನ ರೈನ್ ಬೋ ಲೇಔಟ್‌ನಲ್ಲಿ ಸರಣಿ ಕಳ್ಳತನವಾಗಿದ್ದು, ಐಷಾರಾಮಿ ಮನೆಗಳಲ್ಲಿದ್ದ ಚಿನ್ನಾಭರಣವನ್ನು ಕಳ್ಳರು ದೋಚಿದ್ಧಾರೆ. ಸಿಸಿಟಿವಿ ವರ್ಕ್ ಆಗ್ತಿಲ್ಲ ಅನ್ನೋದನ್ನು ಖಾತ್ರಿ ಮಾಡ್ಕೊಂಡು ಲೂಟಿ ಮಾಡಿದ್ದಾರೆ.ಮನೆಯವರು ವಾಪಸ್ ಬಂದು ನೋಡಿದಾಗ ಕಳ್ಳತನ ಪತ್ತೆಯಾಗಿದೆ.
ರೈನ್ ಬೋ ಲೇಔಟ್‌ನ ಮೂರು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಉದ್ಯಮಿ ಧರ್ಮತೇಜ್, ಟೆಕ್ಕಿಗಳಾದ ಮಂಜುನಾಥ್, ಉದಯ ಭಾಸ್ಕರ್ ಮನೆಯಲ್ಲಿ ಬಾಗಿಲು ಮುರಿದು ಮನೆಗೆ ನುಗ್ಗಿ ಕಳ್ಳತನ ಮಾಡಿದ್ಧಾರೆ. ಎರಡು ವಜ್ರದ ಬಳೆ, ಡೈಮಂಡ್ ಚೈನ್, ಮೂರು ಓಲೆ, 10 ಜೊತೆ ಚಿನ್ನದ ಓಲೆ, ಚಿನ್ನದ ಬಳೆ, ಗೋಲ್ಡ್ ಬ್ರಾಸ್ಲೆಟ್, 2 ಗೋಲ್ಡ್ ಪೆಂಡೆಂಟ್, 3 ಚಿನ್ನದ ಉಂಗುರ, ವಜ್ರ ಸಹಿತ ಚಿನ್ನದ ಸರ ಸೇರಿ ಸುಮಾರು 50 ಲಕ್ಷ ಮೌಲ್ಯದ ವಸ್ತು ಮೂರು ಮನೆಗಳಲ್ಲಿ ಕಳ್ಳತನವಾಗಿದೆ.
ಸದ್ಯ ಮೂರು ಮನೆಗಳಲ್ಲಿ ಕಳ್ಳತನ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಜನರ ಮಳೆಗೆ ಸಂಕಷ್ಟದಲ್ಲಿ ಇದ್ರೆ, ಕಳ್ಳರು ಮಾತ್ರ ತಮ್ಮ ಕೈಚಳಕ ತೋರಿದ್ದು, ಪೊಲೀಸರು ಖದೀಮರನ್ನು ಬಂಧನ ಮಾಡಿ ಜೈಲಿಗೆ ಕಳುಹಿಸುತ್ತಾರಾ ಕಾದು ನೋಡಬೇಕಿದೆ.
ಅಶ್ವಥ್ ಎಸ್. ಎನ್.ಕ್ರೈಂ ಬ್ಯೂರೋ ಪವರ್ ಟಿವಿ