ಮೈಸೂರು : ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಶೇಷ ತಾಲೀಮು ನಡೆಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆಯವರು ಫಿರಂಗಿಯಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಆನೆಗಳು ಹೊರಗಿನ ಭಾರೀ ಸದ್ದಿಗೆ ಹೊಂದಿಕೊಳ್ಳುವಂತೆ ತರಬೇತಿ ನೀಡಿದರು. ವಿಜಯದಶಮಿ ದಿನ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ಮತ್ತು ರಾಷ್ಟ್ರಗೀತೆ ನುಡಿಸುವಾಗ ಗೌರವಾರ್ಥವಾಗಿ 3 ಸುತ್ತಿನಲ್ಲಿ 21 ಕುಶಾಲ ತೋಪುಗಳನ್ನು ಸಿಡಿಸುವುದು ಸಂಪ್ರದಾಯ. ಹೀಗೆ ಸಿಡಿಮದ್ದು ಸಿಡಿಸಿದಾಗ ಉಂಟಾಗುವ ಭಾರೀ ಶಬ್ದದಿಂದ ಆನೆಗಳು ಕುದುರೆಗಳು ಬೆದರುತ್ತವೆ, ಈ ಸಿಡಿಮದ್ದು ಶಬ್ದಕ್ಕೆ ಹೊಂದಿಕೊಳ್ಳಲು ಈ ತಾಲೀಮು ನಡೆಸಲಾಯಿತು.
ಅರಮನೆಗೆ ಹೊಂದಿರುವ ಕೋಟೆ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಆನೆಗಳಿಗೆ ಈ ತರಬೇತಿ ನೀಡಲಾಯಿತು. ಒಟ್ಟು 14 ಆನೆಗಳು, 43 ಕುದುರೆಗಳು ತಾಲೀಮಿನಲ್ಲಿ ಭಾಗವಹಿಸಿದ್ದವು. ಸಿಡಿಮದ್ದು ಸಿಡಿಸಿದ ವೇಳೆ ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಂಡಿದ್ದ ಶ್ರೀರಾಮ, ಪಾರ್ಥಸಾರಥಿ, ಸುಗ್ರೀವ ಆನೆಗಳು ಸ್ವಲ್ಪ ವಿಚಲಿತಗೊಂಡವು. ಉಳಿದ ಆನೆಗಳು ಸದ್ದಿಗೆ ಬೆದರದೆ ಆರಾಮಗಿ ನಿಂತಿದ್ವು. ಇನ್ನು ಸಿಡಿಮದ್ದು ಶಬ್ದಕ್ಕೆ ಕುದುರೆಗಳು ಸ್ವಲ್ಪ ಬೆದರಿ ಓಡಲು ಯತ್ನಿಸಿದ್ವು. ದಸರದಯವರೆಗೂ ಇನ್ನು 2 ಬಾರಿ ಈ ರೀತಿ ತಾಲೀಮು ನೀಡಲಾಗುತ್ತದೆ. ತಾಲೀಮಿಗೂ ಮುನ್ನವೇ ಅಶ್ವಾರೋಹಿ ದಳದ ಕುದುರೆ ಬೆದರಿದ್ದಕ್ಕೆ ಗಜಪಡೆ ವಿಚಲಿತರಾದವು, ಈ ವೇಳೆ ಅನೆಗಳನ್ನ ನಿಯಂತ್ರಿಸಲಾಯ್ತು.
ಇದೇ ಮೊದಲ ಬಾರಿಗೆ ದಸರಾಕ್ಕೆ ಬಂದಿರುವ ಪಾರ್ಥಸಾರಥಿ, ಶ್ರೀರಾಮ, ಸುಗ್ರೀವ, ಶಬ್ದಕ್ಕೆ ಹೆದರುವ ರೀತಿ ವರ್ತಿಸುತ್ತವೋ ಅನ್ನೋ ಆತಂಕ ಅಧಿಕಾರಿಗಳಲ್ಲಿ ಇತ್ತು.ಆದ್ರೆ, ಆ ಆನೆಗಳು ಸಹಾ ಉತ್ಸಾಹದಿಂದಲೇ ತಾಲೀಮಿನಲ್ಲಿ ಪಾಲ್ಗೊಂಡವು. ಇದು ಅಧಿಕಾರಿಗಳಿಗೆ ಸಂತಸ ತಂದಿದೆ. ಇನ್ನೂ 16 ಹಾಗೂ 23 ರಂದು ಎರಡನೇ ಹಂತದ ಸಿಡಿಮದ್ದು ಸಿಡಿಸುವ ತಾಲೀಮು ನಡೆಯಲಿದ್ದು, ಗಜಪಡೆಯನ್ನು ಭರ್ಜರಿಯಾಗಿ ಸಿದ್ದಗೊಳಿಸಲಾಗ್ತಿದೆ.
ಹರೀಶ್ ಜೊತೆ ಸುರೇಶ್ ಬಿ ಪವರ್ ಟಿವಿ ಮೈಸೂರು.