ಬೆಂಗಳೂರು : ಇಂದಿನಿಂದ ಸೆಪ್ಟೆಂಬರ್ 23ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
JDSನಿಂದಲೂ ಸರ್ಕಾರಕ್ಕೆ ಚಾಟಿ ಬೀಸಲು ತಯಾರಿ ನಡೆಸಿದ್ದು, ಸರ್ಕಾರದ ತಾಕತ್ತು. ವಿಪಕ್ಷದ ಧಮ್ ಪ್ರದರ್ಶನಕ್ಕೆ ಅಖಾಡ ರೆಡಿಯಾಗಿದೆ. ಮಳೆಗಾಲದ ಅಧಿವೇಶನಕ್ಕೆ ಮಳೆಗಾಲದ ತೊಂದರೆಗಳೇ ಅಸ್ತ್ರವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್ ತಯಾರಿಯಾಗಿದೆ.
ಇನ್ನು, BJP ವರ್ಸಸ್ ಕಾಂಗ್ರೆಸ್ ಫೈಟ್ಗೆ ವೇದಿಕೆಯಾಗಲಿದೆ. ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್ ಸಿದ್ಧವಾಗಿದ್ದು, ಬೊಮ್ಮಾಯಿ ಸರ್ಕಾರವನ್ನು ಕಟ್ಟಿಹಾಕಲು ಎಲ್ಲಾ ರೀತಿಯಲ್ಲಿ ತಯಾರಿ ನಡೆಸಿದೆ. ಗುತ್ತಿಗೆದಾರ ಸಂಘ ಮಾಡಿರುವ 40% ಕಮಿಷನ್ ಆರೋಪ, ಹಾಗೆನೇ ಬೆಂಗಳೂರು ಮಳೆ ಅನಾಹುತ ಬಗ್ಗೆ ಪ್ರಸ್ತಾಪ ಮಾಡಲು ತೀರ್ಮಾನಿಸಲಾಗಿದ್ದು, ಕಾಂಗ್ರೆಸ್ಗೆ ಕೌಂಟರ್ ಕೊಡಲು ಸಿದ್ಧವಾಗಿರುವ ಬಿಜೆಪಿ ಅರ್ಕಾವತಿ ಲೇಔಟ್ ರೀಡೂ ಪ್ರಕರಣ ಪ್ರಸ್ತಾಪ ಮಾಡಲು CM ಟೀಂ ರೆಡಿಯಾಗಿದೆ. ಕಾಂಗ್ರೆಸ್ ಆರೋಪಕ್ಕೆ ದಾಖಲೆ ಸಮೇತ ಬಿಜೆಪಿ ಸಿದ್ಧಪಡಿಸಿಕೊಂಡಿದೆ.