Wednesday, January 1, 2025

ಕ್ರಿಕೆಟ್​ ಆಟಗಾರ್ತಿ ಜತೆ ಉಂಗುರ ಬದಲಿಸಿಕೊಂಡ ಕರ್ನಾಟಕದ ಕ್ರಿಕೆಟರ್

ಬೆಂಗಳೂರು: ಭಾರತದ ಮಹಿಳಾ ತಂಡದ ಕ್ರಿಕೆಟರ್​ ವೇದಾ ಕೃಷ್ಣಮೂರ್ತಿ ಅವರು ಕ್ರಿಕೆಟಿಗ ಅರ್ಜುನ್ ಹೊಯ್ಸಳ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಪೋಸ್ ಮಾಡಿದ ಫೋಟೋವನ್ನ ಇಬ್ಬರು ತಮ್ಮ ಇನ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ವೇದಾ ಕೃಷ್ಣಮೂರ್ತಿ ಹಂಚಿಕೊಂಡ ಫೋಟೋದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಕರ್ನಾಟಕದ ರಣಜಿ ಎಡಗೈ ಆರಂಭಿಕ ಆಟಗಾರ ಅರ್ಜುನ್ ಹೊಯ್ಸಳ ಅವರು ವೇದಾ ಕೃಷ್ಣಮೂರ್ತಿಗೆ ಮೊಣಕಾಲುರಿ ಪ್ರಪೋಸ್ ಮಾಡಿ ಉಂಗುರ ಇಡುವುತ್ತಿರುವುದನ್ನ ಕಾಣಬಹುದು.

29 ವರ್ಷದ ವೇದಾ ಕೃಷ್ಣಮೂರ್ತಿ 18ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಭಾರತ ಮಹಿಳಾ ತಂಡದ ಪರ 48 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 8 ಅರ್ಧ ಶತಕಗಳೊಂದಿಗೆ 829 ರನ್ ಗಳಿಸಿದ್ದಾರೆ. 76 ಟಿ-20 ಪಂದ್ಯಗಳನ್ನು ಆಡಿದ್ದಾರೆ.

ಇನ್ನು 32 ವರ್ಷದ ಕ್ರಿಕೆಟಿಗ ಅರ್ಜುನ್ ಡಿಸೆಂಬರ್ 2016 ರಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಪಾದಾರ್ಪಣೆ ಮಾಡಿದರು. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಅವರು ಇಲ್ಲಿಯವರೆಗೆ 10 ಪಂದ್ಯಗಳನ್ನು ಆಡಿದ್ದಾರೆ. 2019 ರ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಶಿವಮೊಗ್ಗ ಲಯನ್ಸ್ ಪರ ಆಡಿದ್ದಾರೆ.

RELATED ARTICLES

Related Articles

TRENDING ARTICLES