ಬೆಂಗಳೂರು : ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್ನಲ್ಲಿ ಸಮಸ್ಯೆ ಇದೆ. ಈ ಸಮಸ್ಯೆ ಬಗೆಹರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಬೆಂಗಳೂರಲ್ಲಿ ಮಾತ್ನಾಡಿದ ಅವರು, ಎರಡು ತಿಂಗಳಲ್ಲಿ ಪೂರ್ಣ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಚೆನ್ನೈ-ಬೆಂಗಳೂರು, ಮುಂಬೈ-ಪುಣೆ, ಹೈವೆಗಳು ಕೂಡ ನಿರ್ಮಾಣ ಆಗ್ತಿದೆ. ಬೆಂಗಳೂರಿನ ಟ್ರಾಫಿಕ್ ಬಗ್ಗೆ ಅಧ್ಯಯನ ಮಾಡಲಾಗಿದೆ.
ತುಮಕೂರು ರಸ್ತೆಯಲ್ಲಿ ಫ್ಲೈ ಓವರ್ ಮೂರು ಮಾದರಿಗಳನ್ನು ಬೇರೆ ಕಡೆ ಅಳವಡಿಸಿಕೊಳ್ಳುವಂತೆ ಮಾಡಲಾಗುವುದು.. ಇನ್ನು, 288 ಸ್ಯಾಟ್ಲೈಟ್ ಹೈವೆ ಮಾಡುವ ಗುರಿ ಇದೆ. ಒಟ್ಟು ಎಂಟು ಪ್ರಾಜೆಕ್ಟ್ ಇದಾಗಿದೆ. ಐದು ಕಡೆ ಈಗಾಗಲೇ ಕಾಮಗಾರಿ ಶುರುವಾಗಿದೆ. ಬನ್ನೇರುಘಟ್ಟ ಫಾರೆಸ್ಟ್ ಕ್ಲಿಯೆರೆನ್ಸ್ ಸಿಕ್ಕಿಲ್ಲ. ಅದರ ಕ್ಲಿಯರೆನ್ಸ್ ಅವಶ್ಯಕತೆ ಇದೆ. ಈ ಬಗ್ಗೆ ಸಿಎಂ ಬಳಿ ಕೂಡ ಚರ್ಚೆ ಮಾಡಿದ್ದೇವೆ. ದೆಹಲಿಯಲ್ಲಿ ಇದೇ ಮಾದರಿಯಲ್ಲಿ ಮಾಡಲಾಗ್ತಿದೆ ಎಂದು ಗಡ್ಕಡಿ ಹೇಳಿದ್ದಾರೆ.