ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಪೊಲೀಸರ ಕಾರ್ಯ ವೈಖರಿಗೆ ಮೆಚ್ಚುಗೆಯ ಮಹಾಪೂರವೇ ಅರಿದು ಬರುತ್ತಿದೆ. ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿರುವ ಸಂಚಾರ ವ್ಯವಸ್ಥೆಯನ್ನ ಸುಗಮಗೊಳಿಸಲು ಟ್ರಾಫಿಕ್ ಪೊಲೀಸರಂತೂ ಶತಪ್ರಯತ್ನ ಮಾಡುತ್ತಿದ್ದಾರೆ.
ಮಳೆಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬೆಳ್ಳಂದೂರು ಇಕೋ ಸ್ಪೆಸ್ ಬಳಿ ರಸ್ತೆ ತುಂಬಾ ನೀರು ತುಂಬಿದ್ದ ಪರಿಣಾಮ ಮಡಿವಾಳ ಸಂಚಾರ ಪೊಲೀಸರು ಮೈಕ್ ಹಿಡಿದು ಮಾಹಿತಿ ನೀಡುತ್ತಿದ್ದಾರೆ. ಬಾಣಸವಾಡಿ, ಚಿಕ್ಕಪೇಟೆ ವಿವಿಧ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಳೆ ನಡುವೆಯೂ ರಸ್ತೆಯಲ್ಲಿ ತುಂಬಿದ್ದ ನೀರನ್ನು ಚರಂಡಿಗೆ ಹರಿಯುವಂತೆ ಮಾಡಿ ಯೋಗ್ಯ ಸಂಚಾರಕ್ಕೆ ಅನುವು ಮಾಡುತ್ತಿದ್ದಾರೆ.
ಸಂಚಾರಿ ಪೊಲೀಸರು ರೈನ್ ಕೋರ್ಟ್ ಧರಿಸಿ ಮಳೆಯ ನಡುವೆಯೂ ಕಾರ್ಯಾಚರಣೆ ಮಾಡುತ್ತ ಎಲ್ಲಿಲ್ಲಿ ಮಳೆಯಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದಿಯೋ. ಆ ಸ್ಥಳಗಳಲ್ಲಿ ಸುಗಮ ಸಂಚಾರಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡಿದರು. ನೀರಿನಲ್ಲಿ ಕೆಟ್ಟು ನಿಂತಿರುವ ವಾಹನಗಳಿಗೂ ಸಾಥ್ ನೀಡಿ ಮುಂದೆ ಹೋಗಲು ನೆರವು ನೀಡಿದರು. ಬಿಬಿಎಂಪಿ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಇವರೇ ಮಾಡುತ್ತಿದ್ದು ಇವರ ಕಾರ್ಯವೈಖರಿಗೆ ರಾಜಧಾನಿಯ ಜನರು ಶಾಘ್ಲನೆ ವ್ಯಕ್ತಪಡಿಸುತ್ತಿದ್ದಾರೆ.