ನವದೆಹಲಿ: ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಉಭಯ ದೇಶಗಳ ನಡುವೆ ರಕ್ಷಣಾ ಸಂಬಂಧ ಸಹಿ ಹಾಕಲಾಯಿತು.
ಭದ್ರತಾ ಸಹಕಾರ, ರಕ್ಷಣೆ, ಗಡಿ ನಿರ್ವಹಣೆ, ವ್ಯಾಪಾರ ಮತ್ತು ಸಂಪರ್ಕ, ಜಲ ಸಂಪನ್ಮೂಲಗಳು, ವಿದ್ಯುತ್ ಮತ್ತು ಇಂಧನ, ಅಭಿವೃದ್ಧಿ ಸಹಕಾರ, ಸಾಂಸ್ಕೃತಿಕ ಸೇರಿದಂತೆ ಇನ್ನೀತರ ದ್ವಿಪಕ್ಷೀಯ ಮಾತುಕತೆ ನಡೆಸಲಾಯಿತು.
ಭಾರತವು-ಬಾಂಗ್ಲಾದೇಶದ ದ್ವಿಪಕ್ಷೀಯ ಸಂಬಂಧಗಳಿಗೆ ಹೆಚ್ಚಿನ ವೇಗವನ್ನು ನೀಡುವುದನ್ನು ಮುಂದುವರಿಸಲಾಗಿದೆ. ಮೋದಿ ಅವರ ದೂರದೃಷ್ಟಿಯ ನಾಯಕತ್ವವನ್ನು ನಾನು ಪ್ರಶಂಸಿಸುತ್ತೇನೆ. ಭಾರತವು ಬಾಂಗ್ಲಾದೇಶದ ಅತ್ಯಂತ ಪ್ರಮುಖ ಮತ್ತು ಹತ್ತಿರದ ನೆರೆಯ ರಾಷ್ಟ್ರವಾಗಿದೆ.
ಭಾರತ-ಬಾಂಗ್ಲಾದೇಶ ದ್ವಿಪಕ್ಷೀಯ ಸಂಬಂಧಗಳು ನೆರೆಹೊರೆಯ ರಾಜತಾಂತ್ರಿಕತೆಗೆ ಮಾದರಿಯಾಗಲಿದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದರು.
ಹಸೀನಾ ಅವರ ಮಾರ್ಗದರ್ಶನದಲ್ಲಿ ಬಾಂಗ್ಲಾದೇಶವು ತ್ವರಿತ ಅಭಿವೃದ್ಧಿಯನ್ನು ಕಂಡಿದೆ. ಇದು ಈ ಪ್ರದೇಶದಲ್ಲಿ ನಮ್ಮ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ನಾವು ಬಲವಾದ ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಳ್ಳುತ್ತೇವೆ ಎಂದು ಪ್ರಧಾನಿ ಮೋದಿ ಈ ವೇಳೆ ಹೇಳಿದರು.