ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ, ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಅವರಿಗೆ ಹೃದಯಘಾತ ಸಂಭವಿಸಿ ಬೆಂಗಳೂರಿನ ಎಮ್ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿಂದು ಉಮೇಶ್ ಕತ್ತಿ ಅವರು ಇಂದು ರಾತ್ರಿ 10 ಗಂಟೆಗೆ ಬಾತ್ರೂಮ್ಗೆ ಹೋದ ಸಂದರ್ಭದಲ್ಲಿ ಸಚಿವರಿಗೆ ಹೃದಯಘಾತ ಸಂಭವಿಸಿತ್ತು.
ನಂತರ ಎಂಎಸ್ ರಾಮಯ್ಯ ಆಸ್ಪತ್ರೆಯ ವೈದ್ಯರು ಉಮೇಶ್ ಕತ್ತಿ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.