ಗದಗ: ನಿನ್ನೆ ಸಂಜೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಬರದ ಹಿನ್ನಲೆಯಲ್ಲಿ ಇಂದು ಗ್ರಾಮಸ್ಥರು ಆಕ್ರೋಶಗೊಂಡು ತಹಶೀಲ್ದಾರರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಮಳೆಯಿಂದ ಗ್ರಾಮದಲ್ಲಿ ಹಲವಾರು ಮನೆಗಳು ಬಿದ್ದು ಅವಾಂತರವಾಗಿವೆ. ಈ ಹಿನ್ನೆಲೆ ಇಂದು ಗ್ರಾಮಕ್ಕೆ ವೀಕ್ಷಣೆ ಮಾಡಲು ಬಂದ ತಹಶೀಲ್ದಾರ ಕೆ.ಆರ್.ಪಾಟೀಲ ಅವರನ್ನ ಗ್ರಾಮಸ್ಥರು ಘೇರಾವ್ ಹಾಕಿದರು.
ರಸ್ತೆಯಲ್ಲೇ ನಿಂತು ಮಳೆಹಾನಿ ಪ್ರದೇಶ ವೀಕ್ಷಣೆ ತಹಶೀಲ್ದಾರ ಮಾಡಿದರು. ಆಕ್ರೋಶಗೊಂಡ ಗ್ರಾಮಸ್ಥರಿಂದ ತಹಶೀಲ್ದಾರಗೆ ವಾಹನ ಅಡ್ಡಗಟ್ಟಿ ತರಾಟೆ ತಗೆದುಕೊಂಡಿದ್ದಾರೆ.
ಗ್ರಾಮದಲ್ಲಿ ಸಂಚರಿಸಿ ಬಿದ್ದ ಮನೆಗಳ ವೀಕ್ಷಣೆ ಮಾಡಲಿಲ್ಲ ಅಂತ ಆರೋಪ ಮಾಡಿ, ತಕ್ಷಣ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡಬೇಕು ಅಂತ ಗ್ರಾಮಸ್ಥರು ಒತ್ತಾಯ ಮಾಡಿ, ಕೆಲಹೊತ್ತು ತಹಶಿಲ್ದಾರ್ ವಾಹನ ತಡೆದು ಪ್ರತಿಭಟನೆ ನಡೆಸಿದರು.