ಚಿಕ್ಕಬಳ್ಳಾಪುರ : ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಎರಡು ಕಡೆಗಳಲ್ಲಿ ಗುಡ್ಡ ಕುಸಿತವಾಗಿದೆ. ರಾಜ್ಯಾದ್ಯಂತ ಕಳೆದ 2 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಡೆ ಅನಾಹುತಗಳಾಗುತ್ತಿವೆ. ಅದೇ ರೀತಿ ಪ್ರವಾಸಿಗರ ನೆಚ್ಚಿನ ತಾಣವಾದ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿಯೂ ಗುಡ್ಡ ಕುಸಿತವಾಗಿದೆ.
ಸುಲ್ತಾನಪೇಟೆ ಗ್ರಾಮದ ಕಡೆ ಎರಡು ಕಡೆ ಗುಡ್ಡಗಳು ಕುಸಿದಿದೆ. ಸುಲ್ತಾನಪೇಟೆಯಿಂದ ನಂದಿಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗದ ಕಡೆ ವೀರಭದ್ರ ಸ್ವಾಮಿ ದೇಗುಲದ ಭಾಗದಲ್ಲಿ ಭೂ ಕುಸಿತ ಆಗಿದೆ. ನ್ನೂ ಇದೇ ಸುಲ್ತಾನಪೇಟೆ ಗ್ರಾಮದ ಕಡೆ ಮತ್ತದು ಭಾಗದಲ್ಲಿ ಭೂ ಕುಸಿತ ಆಗಿದೆ. ಬೃಹತ್ ಗಾತ್ರದ ಕಲ್ಲು ಬಂಡೆಗಳು ಮರಗಳು ಮಣ್ಣು ಸಮೇತ ಕೊಚ್ಚಿಕೊಂಡು ಬಂದಿವೆ. ಈ ಗುಡ್ಡ ಕುಸಿತ ಉಂಟಾದ ಭಾಗದಿಂದ ಝರಿಯಂತೆ ನೀರು ಹರಿದುಬರುತ್ತಿದೆ.
ಇನ್ನು, 2 ಕಡೆಗಳಲ್ಲಿ ಗುಡ್ಡ ಕುಸಿತವಾಗಿರುವುದರಿಂದ ಸುಲ್ತಾನಪೇಟೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಕಲ್ಲು ಬಂಡೆಗಳು ಉರುಳಿ ಗ್ರಾಮಕ್ಕೆ ಬರುವ ಭೀತಿಯಲ್ಲಿದ್ದಾರೆ. ಕಳೆದ ವರ್ಷ ಆಗಸ್ಟ್ 25ರಂದು ಸಹ ಇದೇ ರೀತಿ ಗುಡ್ಡ ಕುಸಿತ ಆಗಿತ್ತು.