ಬೆಂಗಳೂರು : ಕಳೆದ ಕೆಲ ದಿನಗಳ ಹಿಂದೆ ಡಿಪೋ 20.21,27 ರಲ್ಲಿ ಡಿಪೋ ಮ್ಯಾನೇಜರ್ ಗಳ ಕಿರುಕುಳ ಆರೋಪದಲ್ಲಿ ಸಿಬ್ಬಂದಿ ಆತ್ಮಹತ್ಯೆ ಮಾಡಿದ ಹಿನ್ನಲೆಯಲ್ಲಿ ಮ್ಯಾನೇಜರ್ಗಳ ವಿರುದ್ಧವೇ ತನಿಖೆ ನಡೆಸಲು ಬಿಎಂಟಿಸಿ ಮುಂದಾಗಿದೆ.
ನಗರದ ಡಿಪೋಗಳಲ್ಲಿ ಚಾಲಕರ ನಿರ್ವಾಹಕರ ಸರಣಿ ಆತ್ಮಹತ್ಯೆ ಬೆನ್ನಲ್ಲೇ ಅಲರ್ಟ್ ಆದ ಬಿಎಂಟಿಸಿ ಇನ್ಮುಂದೆ ಚಾಲಕರು ನಿರ್ವಾಹಕರ ಆತ್ಮಹತ್ಯೆ ಪ್ರಕರಣಗಳಿಗೆ ಕಡಿವಾಣ ಬೀಳುತ್ತಾ.? ಅಥವಾ ಬಿಎಂಟಿಸಿಯಲ್ಲಿ ಸೂಸೈಡ್ ಪ್ರಕರಣಗಳ ಕಡಿವಾಣಕ್ಕೆ ಹೊಸ ಸೂತ್ರ ರೆಡಿ ಆಯ್ತಾ ಎಂದು ಪ್ರಶ್ನೆಯಾಗಿಯೇ ಉಳಿದಿದೆ.
ಮೊದಲ ಹಂತದಲ್ಲಿ 14 ಡಿಪೋ ಮ್ಯಾನೇಜರ್ ಮೇಲೆ ತನಿಖೆ ನಡೆಯಲಿದ್ದು, ಉಳಿದ ಡಿಪೋ ಮ್ಯಾನೇಜರ್ಗಳ ಮೇಲೆ ಹಂತ ಹಂತವಾಗಿ ತನಿಖೆಗೆ ನಿರ್ಧಾರ ಮಾಡಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಡಿಪೋ 20.21,27 ರಲ್ಲಿ ಡಿಪೋ ಮ್ಯಾನೇಜರ್ ಗಳ ಕಿರುಕುಳ ಆರೋಪದಲ್ಲಿ ಸಿಬ್ಬಂದಿ ಆತ್ಮಹತ್ಯೆ ಮಾಡಿದ್ದು, ರಜೆ ಮಂಜೂರು, ಡ್ಯೂಟಿ ವಿಳಂಬ, ಆದಾಯ ಟಾರ್ಗೆಟ್ ವಿಚಾರದಲ್ಲಿ ಡಿಪೋ ಮ್ಯಾನೇಜರ್ ಗಳ ಮೇಲೆ ಕಿರುಕುಳ ಆರೋಪ ಮಾಡಿದ್ದಾರೆ. ಹೀಗಾಗಿ ಮ್ಯಾನೇಜರ್ ಗಳ ವಿರುದ್ಧ ವೇ ತನಿಖೆ ನಡೆಸಲು ಬಿಎಂಟಿಸಿ ಮುಂದಾಗಿದೆ.