ಬೆಂಗಳೂರು: ಬಿಡಿಎ(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷ ಎಸ್.ಆರ್ ವಿಶ್ವನಾಥ್ಗೆ ಇಂದು ಹೈಕೋರ್ಟ್ ರಿಲೀಫ್ ನೀಡಿದೆ.
ಶಾಸಕರಾಗಿ ಲಾಭದಾಯಕ ಹುದ್ದೆ ಹೊಂದಿದ್ದಾರೆ ಅಂತಾ ಬಿಡಿಎ ಅಧ್ಯಕ್ಷ ವಿಶ್ವನಾಥ್ ಅವರ ನೇಮಕಾತಿ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಎಸ್.ಆರ್ ವಿಶ್ವನಾಥ್ ಅವರ ಶಾಸಕ ಸ್ಥಾನವನ್ನೂ ಅನರ್ಹಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಬಿಡಿಎ ಅಧ್ಯಕ್ಷರ ನೇಮಕಾತಿಯನ್ನ ರದ್ದುಪಡಿಸಲು ನಿರಾಕರಿಸಿದೆ. ಬಿಡಿಎ ಅಧ್ಯಕ್ಷ, ಸದಸ್ಯರ ನೇಮಕಕ್ಕೆ ಹೊಸ ನಿಯಮ ಸಿದ್ದಪಡಿಸುವಂತೆ ಸರ್ಕಾರಕ್ಕೆ ಈ ವೇಳೆ ಹೈಕೋರ್ಟ್ ಸೂಚನೆ ನೀಡಿದೆ.
ಇನ್ನು ಹೈಕೋರ್ಟ್ ಆದೇಶವನ್ನ ಎಸ್.ಆರ್ ವಿಶ್ವನಾಥ್ ಸ್ವಾಗತಿಸಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಠಿಣ ಕ್ರಮಗಳನ್ನ ತೆಗೆದುಕೊಳ್ತಿರೋದ್ರಿಂದ ಕೆಲವರು ಕೋರ್ಟ್ ಗೆ ಹೋಗ್ತಿದ್ದಾರೆ ಎಂದರು.