ಬಳ್ಳಾರಿ: ಎಸ್.ಟಿ ಸಮುದಾಯಕ್ಕೆ ಮೀಸಲಾತಿ ಬಗ್ಗೆ ಅಕ್ಕಪಕ್ಕದಲ್ಲಿದ್ದು ಕೊಂಡು ಪರಸ್ಪರ ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ಮತ್ತು ಬಿಜೆಪಿ ವಿರುದ್ಧ ಶಾಸಕ ಜೆ.ಎನ್ ಗಣೇಶ ಅವರು ಟಾಂಗ್ ನೀಡಿದ್ದಾರೆ.
ಎಸ್.ಟಿ ಮೀಸಲಾತಿ ವಿಚಾರದಲ್ಲಿ ಯಾರು ಏನೇ ಮಾತನಾಡಿದ್ರು ನಮ್ಮ ಸರ್ಕಾರ ಮೀಸಲಾತಿ ನೀಡ್ತದೆ. ಸಿದ್ದರಾಮಯ್ಯ ಟ್ವೀಟ್ ಗೆ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಮೂವತ್ತು ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. ನನಗೆ ಯಾರು ಬುದ್ದಿ ಕಲಿಸೋದು ಬೇಕಿಲ್ಲ. ಪಕ್ಕದಲ್ಲಿ ಅವರ(ಕಾಂಗ್ರೆಸ್ನ ಜೆ.ಎನ್ ಗಣೇಶ) ಶಾಸಕರಿದ್ದಾರೆ ಅವರಿಗೆ ಮುಜುಗರ ಮಾಡಲ್ಲ. ಎಸ್ಟಿ ಮೀಸಲಾತಿ ವಿಚಾರದಲ್ಲಿ ನನ್ನ ಮಾತಿಗೆ ನಾನು ಬದ್ಧವಾಗಿದ್ದೇನೆ. ಸಿದ್ದರಾಮಯ್ಯ ಸಿಎಂ ಇದ್ದಾಗ ಮೀಸಲಾತಿ ಮಾಡಿಲ್ಲ. ಅದನ್ನು ನಾವು ಮಾಡ್ತೇವೆಂದ ಶ್ರೀರಾಮುಲು ಹೇಳಿದರು.
ಶ್ರೀರಾಮುಲು ಮಾತು ಮುಗಿಯುತ್ತಿ ದ್ದಂತೆಯೇ ಮಾತಿಗಿಳಿದ ಶಾಸಕ ಜೆ.ಎನ್ ಗಣೇಶ, ರಾಜಕಾರಣಿಯಾದವರು ಒಮ್ಮೆ ಯಾದ್ರೂ ಸತ್ಯ ಹೇಳಬೇಕು. ಕಳೆದ ಹತ್ತು ವರ್ಷದಿಂದ ಇದನ್ನೇ ಮಾಡ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮೀಸಲಾತಿ ಕೊಡ್ತೇವೆ. ರಕ್ತದಲ್ಲಿ ಬರೆದುಕೊಡ್ತೇವೆ ಕೊನೆಗೆ ರಾಜೀನಾಮೆ ನೀಡ್ತೇನೆ ಎಂದ್ರು ಶ್ರೀರಾಮುಲು, ಆದರೆ, ಮೀಸಲಾತಿ ಕೋಡ್ತೇವೆ ಎನ್ನೋ ಕಾರಣಕ್ಕೆ ವಾಲ್ಮೀಕಿ ಜನಾಂಗ ಬಿಜೆಪಿಗೆ ಮತ ಹಾಕಿದೆ. ಬಿಜೆಪಿ 105 ಕ್ಷೇತ್ರದಲ್ಲಿ ಗೆಲ್ಲಲು ಪರೋಕ್ಷವಾಗಿ ಸಮುದಾಯ ಸಪೋರ್ಟ್ ಮಾಡಿದ್ದಾರೆ. ಆದ್ರೇ ಇವರು ಈಗ ಮಾಡ್ತಿರೋದೇನು ಎಂದು ಶ್ರೀರಾಮುಲು ವಿರುದ್ಧ ಶಾಸಕ ಗಣೇಶ್ ವಾಗ್ದಾಳಿ ನಡೆಸಿದರು.
ಸಮಾಜಕ್ಕೆ ಸುಳ್ಳು ಹೇಳಿ ಮತ ಪಡೆದ ಶ್ರೀರಾಮುಲು ಮತ್ತು ಬಿಜೆಪಿ ತಕ್ಕ ಪಾಠ ಕಲಿಸುತ್ತಾರೆ. ನೀರಾವರಿ ಕಾಮಗಾರಿ ಸಮ್ಮಿಶ್ರ ಸರ್ಕಾರದ್ದು ಎಂದು ಜೆ.ಎನ್ ಗಣೇಶ್ ಹೇಳಿದರು.