Tuesday, November 26, 2024

ಮಳೆನಾ ಯಾರಿಂದಲೂ ತಡೆಯಲು ಆಗಲ್ಲ : ಆರ್ ಅಶೋಕ್

ಬೆಂಗಳೂರು : ಸಿಲಿಕಾನ್​ ಸಿಟಿ ಹೊರತುಪಡಿಸಿ ಜಿಲ್ಲೆಗಳಲ್ಲಾದ ಹಾನಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿಜೆಪಿ ಶಾಸಕ ಆರ್ ಅಶೋಕ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ವಾಡಿಕೆಗಿಂತ ಹೆಚ್ಚು ಮಳೆ ಬಂದಿದ್ದರಿಂದ ಸಮಸ್ಯೆಯಾಗಿದೆ. ಬೆಂಗಳೂರಿನ ಕೆಲ ಭಾಗದಲ್ಲಿ ಬೊಮ್ಮಾಯಿ‌ ಮಳೆ ಹಾನಿಯಾಗಿದ್ದಾಗ ಭೇಟಿ ನೀಡಿದ್ರು. ಆ ಭಾಗದಲ್ಲಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದರು.

ಇನ್ನು, ಈ‌ ಸಲ ಮಳೆಯಿಂದಾಗಿ ಬೊಮ್ಮನಹಳ್ಳಿ ಮಹದೇವಪುರ ಭಾಗದಲ್ಲಿ ಹಾನಿಯಾಗಿದೆ. ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತಿದೆ. ಬೆಂಗಳೂರು ಹೊರತುಪಡಿಸಿ ಜಿಲ್ಲೆಗಳಲ್ಲಾದ ಹಾನಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾನಿಯಾಗಿರೋ‌ ಮನೆಗಳಿಗೆ ಪರಿಹಾರ ‌ಕೊಡಲಾಗುತ್ತಿದೆ. ನಿರಾಶ್ರಿತರಿಗೆ 15 ದಿನಗಳ ಆಹಾರ ಕಿಟ್ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.

ಅದಲ್ಲದೇ, ಬೆಂಗಳೂರು ಬ್ರ್ಯಾಂಡ್ ಹಾಳಾಗುತ್ತಿರೋ ಬಗ್ಗೆ ಮೋಹನದಾಸ್ ಪೈ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಟ್ವೀಟನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ. ನಗರ ಸಾಕಷ್ಟು ಬೆಳೆದಿದ್ದು ಹಲವು ರಾಜ್ಯದಿಂದ ಜನರು ಇಲ್ಲಿಗೆ ಬರ್ತಿದ್ದಾರೆ. ಯಾರೋ ಎನೋ ಹೇಳಿದ್ರು ಅಂದ್ರೆ ಬೆಂಗಳೂರು ಬ್ಯ್ರಾಂಡ್ ಹಾಳಾಗಲ್ಲ. ಮಳೆ ಏನು ಬೆಂಗಳೂರಲ್ಲಿ ಮಾತ್ರ ಆಗಿಲ್ಲ. ಅಮೇರಿಕಾ, ಪಾಕಿಸ್ತಾನ, ಸೇರಿ ಎಲ್ಲಾ ಕಡೆ ಆಗಿದೆ. ಮಳೆನಾ ಯಾರಿಂದಲೂ ತಡೆಯಲು ಆಗಲ್ಲ. ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ತಗೆದುಕೊಳ್ಳಬಹುದು. ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತದೆ ಎಂದರು.

RELATED ARTICLES

Related Articles

TRENDING ARTICLES