ಬೆಂಗಳೂರು : ಕಳೆದ ಮೂರು ನಾಲ್ಕು ದಿನದಿಂದ ಬೆಂಗಳೂರಿನಲ್ಲಿ ದಾಖಲೆಯ ಮಳೆಯಾಗುತ್ತಿದೆ. ಉದ್ಯಾನನಗರಿಯ ರಸ್ತೆಗಳು ಮಳೆ ಗೂ ಮುನ್ನವೇ ಗುಂಡಿ ಗಂಡಾಂತರದಿಂದ ಸುದ್ದಿಯಲ್ಲಿದ್ದವು.ಆದ್ರೆ, ಇದೀಗ ಮತ್ತೆ ಮಳೆ ಬಂದು ಅದ್ವಾನವಾಗಿ ಬಿಟ್ಟಿದೆ.ಸರ್ಜಾಪುರ, ಮಾರತಹಳ್ಳಿ, ಸಿಲ್ಕ್ ಬೋರ್ಡ್ ಸೇರಿ ಹಲವು ಪ್ರದೇಶಗಳು ಪ್ರವಾಹದಿಂದ ತತ್ತರಿಸಿ ಹೋಗಿವೆ.ಅಷ್ಟೇ ಅಲ್ಲದೆ, ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಈ ಹಿಂದೆ ಕಿರಣ್ ಮುಜುಂದರ್ ಶಾ ಟ್ವೀಟ್ ಮಾಡಿ ಗಮನ ಸೆಳೆದಿದ್ರು. ಇದೀಗ ಉದ್ಯಮಿ ಮೋಹನ್ ದಾಸ್ ಪೈ ಕೂಡ ಟ್ವೀಟ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಭಾರೀ ಮುಖಭಂಗ ತರಿಸಿದೆ.
ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿದ ಉದ್ಯಮಿ ಮೋಹನ್ ದಾಸ್ ಪೈ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.ನರೇಂದ್ರ ಮೋದಿಯವರೇ ಬೆಂಗಳೂರನ್ನು ಉಳಿಸಿ.ರಾಜಕಾಲುವೆಗಳು ಹೂಳಿನಿಂದ ತುಂಬಿವೆ.ಎಲ್ಲಾ ಕಡೆ ಕಸ, ಕಟ್ಟಡಗಳ ತ್ಯಾಜ್ಯಗಳು ಬಿದ್ದಿವೆ.. ಮುಖ್ಯವಾದ ಯೋಜನೆಗಳು ದಿನೇದಿನೇ ವಿಳಂಬವಾಗುತ್ತಿವೆ.ಇದನ್ನು ಪರಿಶೀಲನೆ ಮಾಡಿ ಅಂತ ಮನವಿ ಮಾಡಿಕೊಂಡಿದ್ದಾರೆ.ಹಾಗೇ 40% ಕಮೀಷನ್ ಬೆಂಗಳೂರಿನ ಸಮಸ್ಯೆಗೆ ಮೂಲ ಕಾರಣ ಎಂಬ ಚರ್ಚೆಯಿದೆ.ಈ ಬಗ್ಗೆ ಪೈ ಟ್ವೀಟ್ ಮಾಡಿ ಬೆಂಗಳೂರನ್ನು ಭ್ರಷ್ಟಾಚಾರ ಮುಕ್ತ ಮಾಡಿ.ದೆಹಲಿಯನ್ನು ಭ್ರಷ್ಟಾಚಾರ ಮುಕ್ತ ಮಾಡೋದಾದರೇ ಬೆಂಗಳೂರನ್ನೂ ಯಾಕೆ ಕರ್ನಾಟಕದಲ್ಲಿ ಮಾಡುತ್ತಿಲ್ಲ ಅಂತಾ ಟೀಕಿಸಿದ್ದಾರೆ.ಅಲ್ಲದೇ, ಮೋದಿ, ಅಮಿತ್ ಶಾ, ಬಿಎಲ್ ಸಂತೋಷ್ ಹಾಗೂ ಬೊಮ್ಮಾಯಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದು, ಬೆಂಗಳೂರಿನ ಅವ್ಯವಸ್ಥೆಯನ್ನು ಹೈಕಮಾಂಡ್‌ಗೂ ತಲುಪಿಸುವ ಕೆಲಸ ಮಾಡಿದ್ದಾರೆ.
ಬುಧವಾರ ಹಬ್ಬ.ಜನರೆಲ್ಲಾ ಹಬ್ಬದಲ್ಲಿ ಬ್ಯುಸಿ ಇರ್ತಾರೆ.ಹೀಗಾಗಿ ಗುರುವಾರ ಮಧ್ಯಾಹ್ನ ಸಿಎಂ ಸಿಟಿ ರೌಂಡ್ಸ್ ಮಾಡಲು ನಿರ್ಧಾರ ಮಾಡಿದ್ದಾರೆ.ಇದಕ್ಕಾಗಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ನೆರೆಪೀಡಿತ ಪ್ರದೇಶಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ, ಅಧಿಕಾರಿಗಳು ಮೊದಲು ಜನರನ್ನು ಆಪತ್ತಿನಿಂದ ರಕ್ಷಿಸಿ. ಬಳಿಕ ಅವರಿಗೆ ಪುನರ್ವಸತಿ ಕಲ್ಪಿಸಿ ಅಂತ ಖಡಕ್ ಸೂಚನೆ ಕೊಟ್ಟಿದ್ದಾರೆ. ಹಾಗೇ ರಸ್ತೆ ಬದಿಗಳಲ್ಲಿರುವ ಡೆಬ್ರಿಸ್ ತೆರವು ಮಾಡಿ, ಕಸದ ಸಮಸ್ಯೆ ಮಳೆ ಬಂದಾಗಲೆಲ್ಲಾ ಹೆಚ್ಚಾಗುತ್ತದೆ.ಇದಕ್ಕೆ ಪರಿಹಾರ ಕಂಡುಕೊಂಡು ಕ್ರಮ ವಹಿಸಿ ಅಂತ ಸೂಚಿಸಿದ್ದಾರೆ.
ಪ್ರತಿ ಬಾರಿ ಮಳೆ ಆರ್ಭಟ ಜೋರಾದಾಗೆಲ್ಲಾ ಸಿಎಂ ಸಿಟಿ ರೌಂಡ್ಸ್ ಇರುತ್ತೆ. ಆದ್ರೆ, ಮತ್ತೆ ಮಳೆ ಬಂದಾಗ ಅದೇ ಕಥೆ ವ್ಯಥೆ ಮುಂದುವರಿಯುತ್ತದೆ. ಈ ಸಮಸ್ಯೆಗಳಿಗೆಲ್ಲಾ ಶಾಶ್ವತ ಪರಿಹಾರ ಕಲ್ಪಿಸಿ ಅಂತ ಜನ ಆಗ್ರಹಿಸುತ್ತಿದ್ದಾರೆ.
ರೂಪೇಶ್ ಬೈಂದೂರು ಪವರ್ ಟಿವಿ